ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಬಂದರಿನಲ್ಲಿ ಮಲಗಿದ್ದ ಕಾರ್ಮಿಕನ ಮೇಲೆ
ಮೀನು ತುಂಬಿದ ಬೊಲೆರೋ ವಾಹನ ಹರಿದ ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಕೋಲ್ ನಲ್ಲಿ ನಡೆದಿದೆ.

ಹಾವೇರಿ ಮೂಲದ ಹನುಮಂತ್ ವಡ್ಡರ್ (27) ಎಂಬಾತನೆ ಘಟನೆಯಲ್ಲಿ ಮೃತ ಕಾರ್ಮಿಕನಾಗಿದ್ದಾನೆ. ಈತ ಕಾರವಾರದ ಬೈತಕೋಲ್ ಬಂದರಿನಲ್ಲಿ ಮೀನಗಾರಿಕಾ ಕಾರ್ಮಿಕನಾಗಿ ದುಡಿಯುತಿದ್ದ, ಈತ ಕೆಲಸ ಮುಗಿಸಿಕೊಂಡು ಅಲ್ಲೆ ಮಲಗಿದ್ದ, ಈ ವೇಳೆ ಮೀನು ತುಂಬಿದ ಬೊಲೋರೋ ವಾಹನ ಆತನ ಮೇಲೆ ಹರಿದ ಪರಿಣಾಮವಾಗಿ ಕಾರ್ಮಿಕರ ಮೃತಪಟ್ಟಿದ್ದಾನೆ.

ನವೆಂಬರ್ ತಿಂಗಳಲ್ಲಿ ಮೃತ ಕಾರ್ಮಿನ ವಿವಾಹ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ. ಈ ನಡುವೆ ವಿಧಿಯ ಆಟಕ್ಕೆ ಕಾರ್ಮಿಕ ಸಾವನ್ನಪ್ಪಿರುವುದು ದುರಂತ. ಘಟನೆ ಬಗ್ಗೆ ಕಾರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಗಮನಿಸಿ