ಸುದ್ದಿಬಿಂದು ಬ್ಯೂರೋ
ಕಾರವಾರ :ಕಳೆದವಾರ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ (Congress)ದೊಡ್ಡಮಟ್ಟದಲ್ಲಿ ಹಿನ್ನಡೆ ಉಂಟಾಗಿದ್ದು, ಬರಲಿರುವ ಲೋಕಸಭಾ ಚುನಾವಣೆ ವೇಳೆ ಇದು ಕರ್ನಾಟಕದಲ್ಲೂ ಪರಿಣಾಮ ಉಂಟಾಗುವುದನ್ನ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದು,ಸಂಘಟನೆ ಕೊರೆಯಿದ್ದಲ್ಲಿ ಬಲಪಡಿಸಲು ಮುಂದಾಗಿದೆ,ಅಧಿವೇಶನದ ಬಳಿಕ ಪಕ್ಷ‌ ಸಂಘಟನೆಗೆ ಕಾಂಗ್ರೆಸ್ ನಾಯಕರು ಹೆಚ್ಚಿನ ಒತ್ತುನೀಡಲಿದ್ದಾರೆ
.

ಉತ್ತರಕನ್ನಡ ಸೇರಿದಂತೆ ಕೆಲವೊಂದು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕೊರೆತೆ ಉಂಟಾಗಿದೆ ಎನ್ನುವುದು ಪಕ್ಷದ ಹೈಕಮಾಂಡ ಗಮನಕ್ಕೆ ಬಂದಿದೆ,ಈ ನಿಟ್ಟಿನಲ್ಲಿ ಯಾವೇಲ್ಲಾ ಭಾಗದಲ್ಲಿ ಸಂಘಟನೆಗೆ ಹಿನ್ನಡೆಯಾಗುತ್ತಿದೆ.ಅದಕ್ಕೆ ಕಾರಣಗಳು ಏನು. ಹಾಲಿ ಇರುವ ಜಿಲ್ಲಾ ಘಟಕದ ಅಧ್ಯಕ್ಷರುಗಳು ಕ್ಷೇತ್ರದಲ್ಲಿ ಯಾವ ರೀತಿ ಹಿಡಿತ ಇಟ್ಟುಕೊಂಡಿದ್ದಾರೆ ಎನ್ನುವ ಕುರಿತಾಗಿ ಈಗಾಗಲೇ ಪಕ್ಷದ ನಾಯಕರು ಮಾಹಿತಿ ಸಂಗ್ರಹಿಸಿದ್ದಾರೆನ್ನಲಾಗಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣಾ ಬಳಿಕ‌ ಪಕ್ಷ ಸಂಘಟನೆ ಸಂಪೂರ್ಣವಾಗಿ ನೆಲಕಚ್ಚಿದೆ ಎನ್ನುವುದು ರಾಜ್ಯದ ಕಾಂಗ್ರೆಸ್ ನಾಯಕರ ಗಮನಕ್ಕೂ ಕೂಡ ಬಂದಿದ್ದು, ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ತನ್ನ ಅಸ್ಥಿತ್ವ ಏನಾದರೂ ಇಟ್ಟಕೊಳ್ಳಬೇಕಾದರೆ. ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಇಲ್ಲದೆ ಹೋದರೆ ಕಾಂಗ್ರೆಸ್ ಜಿಲ್ಲೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಜಿಲ್ಲೆಯ ಕಾಂಗ್ರೆಸ್ ‌ನಾಯಕರು ಹೈಕಮಾಂಡ ಗಮನಕ್ಕೆ ತಂದಿದ್ದಾರೆ.
ಕಳೆದ‌ ಕೆಲ ತಿಂಗಳ ಹಿಂದೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಚಿವ ಎಚ್ ಕೆ ಪಾಟೀಲ್ ಎದುರಲ್ಲೆ ಜಿಲ್ಲೆಯಲ್ಲಿ ಪಕ್ಷ ಸಂಘನೆ ಮೊದಲಿನಂತೆ ಇಲ್ಲ ಎನ್ನುವ ಬಗ್ಗೆ ಚರ್ಚೆ ಕೂಡ ಆಗಿತ್ತು.

ಮುಂದಿನ ದಿನದಲ್ಲಿ ಇದು ಸರಿಯಾಗಬಹುದು ಎಂದು ಜಿಲ್ಲೆಯ ಕಾಂಗ್ರೆಸ್ಸಿಗರು ಅಂದುಕೊಂಡಿದ್ದರು.ಆದರೆ ಅದೆ ಪರಿಸ್ಥಿತಿ ಈಗಲೂ ಹಾಗೆ ಮುಂದುವರೆದಿರುವಿದು ಪಕ್ಷದ ಜಿಲ್ಲಾ ಘಟಕ ಕೆಲ ಪದಾಧಿಕಾರಿಗಳು ಸೇರಿದಂತೆ ಬೂತ್ ಮಟ್ಟದ ಸಂಘಟಕರು ಇದನ್ನ ಇಟ್ಟುಕೊಂಡು ಲೋಕಸಭೆ ಚುನಾವಣೆ ಹೇಗೆ ಎದುರಿಸ ಬೇಕು ಎನ್ನುವ ಚಿಂತೆಯಲ್ಲಿದ್ದಾರೆ.

ಎಲ್ಲವನ್ನ ಸೂಕ್ಷ್ಮವಾಗಿ ಅವಲೋಕಿಸಿರುವ ‘ಕೈ’ ಹೈಕಮಾಂಡ ಬದಲಾವಣೆ ಮುಂದಾಗಿರುವುದು ಪಕ್ಷದ ಬಲ್ಲಮೂಲಗಳಿಂದ ತಿಳಿದುಬಂದಿದೆ.