ಸುದ್ದಿಬಿಂದು ಬ್ಯೂರೋ
ನವದೆಹಲಿ : ರಾಜ್ಯ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕೊನೆಗೂ ತೆರೆ ಬಿದಿದ್ದು, ಮೊದಲ ಎರಡು ವರ್ಷ ಸಿದ್ದರಾಮಯ್ಯ ಹಾಗೂ ಉಳಿದ ಮೂರು ವರ್ಷ ಡಿ ಕೆ ಶಿವಕುಮಾರ ಅವರಿಗೆ ಸಿ ಎಂ ಹುದ್ದೆ ನೀಡಲಾಗಿದ್ದು, ನಾಳೆ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮುಖ್ಯಂತ್ರಿ ನೀನಾ ನಾನಾ ಎನ್ನುವ ಗುದ್ದಾಟದಲ್ಲಿ ಮೊದಲ ಹಂತದಲ್ಲಿ ಸಿದ್ದು ಗೆದ್ದಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಹುದ್ದೆ ತಮದೇ ಬೇಕೆಂದು ದೆಹಲಿ ನಾಯಕ ಮನೆ ಕದ ತಟ್ಟಿದ್ದರು. ದೆಹಲಿ ಕದ ತಟ್ಟಿದ ನಾಯಕರಲ್ಲಿ ಬಹುತೇಕ ಸಿದ್ದರಾಮಯ್ಯಗೆ ಹೈಕಮಾಂಡ್ ಅಸ್ತು ಎಂದಿದ್ದಾರೆ. ನಿನ್ನೆ ಅಷ್ಟೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯೊಂದಿಗೆ ಒನ್ ಟು ಒನ್ ಮಿಟಿಂಗ್ ನಡೆಸಿದ್ದ ವೇಳೆ ಸಿಎಂ ಹುದ್ದೆಯನ್ನು ತಲಾ ಎರಡೂವರೆ ಹಂಚಿಕೆ ಮಾಡುವ ತೀರ್ಮಾನ ಕೈಗೊಂಡರೇ ಮೊದಲಿಗೆ ತಮಗೆ ಸಿಎಂ ಹುದ್ದೆ ನೀಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಎದುರು ಸಿದ್ದರಾಮಯ್ಯ ಬೇಡಿಕೆ ಇಟ್ಟಿದ್ದರು. ಇದು ಕೊನೆಯ ಚುನಾವಣೆ ಎಂದು ಜನರಿಗೆ ಹೇಳಿದ್ದೇನೆ.
ಹೀಗಾಗಿ ಎರಡೂವರೆ ವರ್ಷ ಸಿಎಂ ಆಗಿಬಿಡುತ್ತೇನೆ. ನಾವು ಕೊಟ್ಟ ಭರವಸೆ ಈಡೇರಿಸಲು ಎರಡೂವರೆ ವರ್ಷ ಸಿಎಂ ಹುದ್ದೆ ಕೊಡಿ. ಕಾಂಗ್ರೆಸ್ ಪಕ್ಷದ ಬಹುಸಂಖ್ಯಾತ ಶಾಸಕರು ತಾನೇ ಸಿಎಂ ಆಗಬೇಕೆಂದು ಬಯಸಿದ್ದಾರೆ. ವೀಕ್ಷಕರ ಎದುರು ಸಿದ್ದರಾಮಯ್ಯಗೆ ಸಿಎಂ ಹುದ್ದೆ ನೀಡಬೇಕೆಂದು ಹೇಳಿದ್ದರು. ಆದರೆ ಇದೀಗ ಸಿದ್ದರಾಮಯ್ಯ ಅವರಿಗೆ ಎರಡು ವರ್ಷಗಳ ಕಾಲ ಮಾತ್ರ ಸಿ ಎಂ ಹುದ್ದೆ ನೀಡಲು ತೀರ್ಮಾನಿಸಲಾಗಿದೆ.
ಹೀಗಾಗಿ ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಸ್ಥಾನ ನೀಡಿಡಿಕೆ ಶಿವಕುಮಾರ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಚರ್ಚೆ ಆಗಿದೆ. ಜೊತೆಗೆ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಅಧ್ಯಕ್ಷ ಹುದ್ದೆ ಜೊತೆ ಡಿಕೆ ಶಿವಕುಮಾರ್ ಆಸೆಯಂತೇ ಎರಡು ಪ್ರಮುಖ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ..
ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3-30ಕ್ಕೆ ಸಿದ್ದರಾಮಯ್ಯ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದ್ದು ಒಂದು ವೇಳೆ ನಾಳೆ ತಪ್ಪಿದರೆ ಶನಿವಾರ ಕಾರ್ಯಕ್ರಮ ನಿಗದಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಇವರ ಜೊತೆ ಒಂದಿಷ್ಟು ಮಂದಿ ಸಚಿವರಾಗಿಯೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.