ಸುದ್ದಿಬಿಂದು ಬ್ಯೂರೋ
ಕಾರವಾರ : ರಾಷ್ಟ್ರೀಯ ಹೆದ್ದಾರಿ 66ರ(National Highway 66)ಬಿಣಗಾ ದಿಂದ ಕಾರವಾರದವರೆಗೆ ನಿರ್ಮಿಸಲಾಗಿದ್ದ ಟನಲ್ ಪಿಟ್ನೆಸ್ ಸರ್ಟಿಫಿಕೇಟ್ ಸಿಗದ ಹಿನ್ನಲೆಯಲ್ಲಿ IRB. ಕಂಪನಿಯಿಂದ ಅವೈಜ್ಞಾನಿಕ ಕಾಮಗಾರಿ ನಡೆದಿರುವ ಬಗ್ಗೆ ಸ್ಥಳೀಯ ಶಾಸಕ ಸತೀಶ್ ಇಂದು ಪ್ರತಿಭಟನೆ ನಡೆಸಿದ್ದು, ಇದೀಗ ಟೋಲ್ ಶುಲ್ಕ (Toll Fee Collection Bandh) ವಸೂಲಿ ಇಂದಿನಿಂದ ಉತ್ತರಕನ್ನಡ ಜಿಲ್ಲೆಯ ಹಟ್ಟಿಕೇರಿಯಲ್ಲಿರುವ ಟೋಲ್ ನಲ್ಲಿ ಟೋಲ್ ಶುಲ್ಕ ವಸೂಲಿಯನ್ನ ಸಂಪೂರ್ಣ ಸ್ಥಗಿತ ಮಾಡಲಾಗಿದೆ.
ಕಾರವಾರದ ಬಿಣಗಾ ಬಳಿ ಇರುವ ಟನಲ್. ಭಾರೀ ಮಳೆ ಹಿನ್ನಲೆಯಲ್ಲಿ ಟನಲ್ ನಿಂದ ನೀರು ಸೋರಿಕೆ ಆಗುತ್ತಿತ್ತು. ಜನರ ಸುರಕ್ಷತಾ ದೃಷ್ಟಿಯಿಂದ ಕಳೆದ ಎರಡು ದಿನದ ಹಿಂದೆ ಫಿಟ್ನೆಸ್ ಸರ್ಟಿಫಿಕೇಟ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ.(Minister Mankalu Vaidya,)ಮತ್ತು ಶಾಸಕ ಸತೀಶ್ ಸೈಲ್ IRB ಅಧಿಕಾರಿಗೆ ಸೂಚನೆ ನೀಡಿದ್ದರು, ಒಂದುವೇಲಳೆ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದೆ ಹೋದಲ್ಲಿ ಟನಲ್‌ನಲ್ಲಿ (Tunnel) ವಾಹನ ಸಂಚಾರ ಬಂದ್ ಮಾಡಿ ಟೋಲ್ ವಸೂಲಿ ನಿಲ್ಲಿಸುವಂತೆ IRB ಅಧಿಕಾರಗಳಿಗೆ ಸೂಚನೆ ನೀಡಿದ್ದರು.
ಮೂರು ದಿನ ಕಳೆದ್ರು ಇನ್ನು ಪಿಟ್ನೆಸ್ ಸರ್ಟಿಫಿಕೇಟ್ ನೀಡದ ಗುತ್ತಿಗೆ ಪಡೆದ IRB ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೀಡಿರಲಿಲ್ಲ ಹೀಗಾಗಿ ಇಂದು ಸ್ಥಳೀಯ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಸಾರ್ವಜನಿಕರು ಟೋಲ್ ಸುಂಕ ಪಡೆಯಬಾರದೆಂದು ಪ್ರತಿಭಟನೆ ನಡೆಸಿದ್ದು, ಹೀಗಾಗಿ ಟೋಲ್ ಸುಂಕ ಸ್ಥಗಿತಗೊಳಿಸಿ ಉಚಿತವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲಿಯವರೆಗೆ ಟನಲ್ ಪಿಟ್ನೆಸ್ ಸರ್ಟಿಫಿಕೇಟ್ ನೀಡಲ್ಲ ಅಲ್ಲಿ ತನಕ ಟೋಲ್ ಸುಂಕ ಪಡೆಬಾರದೆಂದು ಎಚ್ಚರಿಕೆ ನೀಡಿಲಾಗಿದೆ…