ಸುದ್ದಿಬಿಂದು ಬ್ಯೂರೋ
ಕಲಬುರಗಿ : ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಮ್ಮಗೆ ಹಪ್ತಾ ವಸೂಲಿ ಮಾಡುವ ಕೆಲಸಕ್ಕೆ ಹಚ್ಚುತ್ತಾರೆ ಎಂದು ಪೊಲೀಸ್ ಕಾನಸ್ಟೇಬಲ್ ಒಬ್ಬರು ತಮ್ಮ ಇಲಾಖೆಯ ಮೇಲಾಧಿಕಾರಿ ವಿರುದ್ಧ ಹೊರಹಾಕಿರುವ ಆಕ್ರೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಲಬುರಗಿ ಜಿಲ್ಲಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಭೀಮಾ ನಾಯ್ಕ ಎಂಬುವವರು ತನ್ನ ಇಲಾಖೆಯ ಮೇಲಾಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮರಳು ದಂಧೆಕೋರರು ಹಾಗೂ ವೈನ್ ಶಾಪ್ ಗಳಿಂದ (Vice Shop) ಹಪ್ತಾ ವಸೂಲಿ ಮಾಡಿಕೊಂಡು ಬರುವಂತೆ ಕಿರುಕುಳ ನೀಡುತ್ತಾರೆ. ಪಿಎಸ್ಐ (Psi), ಸಿಪಿಐ(Cpi), ಡಿವೈಎಸ್ಪಿ (Dysp), ಅವರು ಹಪ್ತಾ ವಸೂಲಿ ಮಾಡುವಂತೆ ಹೇಳತ್ತಾರೆ. ವಸೂಲಿ ಮಾಡಿಕೊಂಡು ಬರದೆ ಇದ್ದರೆ ಮನಸ್ಸಿಗೆ ಬಂದ ಸ್ಥಳಕ್ಕೆ ವರ್ಗಾವಣೆ ಮಾಡತ್ತಾರೆ. ಇವರೆಲ್ಲಾ ಕಳೆದ ಅನೇಕ ವರ್ಷಗಳಿಂದ ವರ್ಗಾವಣೆ ಆಗದೆ ಒಂದೆ ಕಡೆ ಇದ್ದಾರೆ.
ಕಳೆದ ಕೆಲದಿನಗಳ ಹಿಂದೆ ಈ ಹಿರಿಯ ಅಧಿಕಾರಿಗಳಿಂದ ಹಪ್ತಾವಸೂಲಿಯ ಕಿರುಕುಳ ತಾಳಲಾರದೆ ಕಾನಸ್ಟೇಬಲ್ (Constable)ಆಗಿದ್ದ ಚಂದ್ರಕಾಂತ ಎಂಬುವವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು.ಇವರನ್ನ ಸಹ ಅದೆ ಕಾರಣಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಚಂದ್ರಕಾಂತ ಅವರನ್ನ ಫರಹತಾಬಾದ್ ಗೆ ವರ್ಗಾವಣೆ ಮಾಡಿದ್ದರು. ಈಗಾಗಲೆ ಇದುವರಗೆ 59ಕಾನಸ್ಟೇಬಲ್ ಗಳನ್ನ ವರ್ಗಾವಣೆ ಮಾಡಲಾಗಿದೆ ಎಂದು ನೊಂದ ಕಾಸ್ಟೇಬಲ್ ಭೀಮಾನಾಯ್ಕ ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ(Social media)ವೈರಲ್ ಆಗಿದ್ದು ಪೊಲೀಸ್ ಇಲಾಖೆಯೆ ತಲೆತಗ್ಗಿಸುವಂತಹ ಕೆಲಸವಾಗಿದೆ.