ಸುದ್ದಿಬಿಂದು ಬ್ಯೂರೋ
ಕಾರವಾರ
: ಕಾಂಗ್ರೆಸ್‌ ಪ್ರತಿಭಟನೆಯಿಂದ ಮಂಗಳವಾರ ಸಂಜೆಯವರೆಗೂ ಟೋಲ್ ಸಂಗ್ರಹ ಸ್ಥಗಿತಗೊಳಿಸಿದ್ದ ಐಆರ್‌ಬಿ,(IRB) ನಿನ್ನೆ ರಾತ್ರಿ ಮತ್ತೆ ಟೋಲ್
(Toll Collection) ಸಂಗ್ರಹ ಪುನರಾರಂಭಿಸಿದೆ.

ಮಂಗಳವಾರ ಬೆಳಿಗ್ಗೆ ಸ್ಥಳೀಯ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದರು. ಕೆಲ ಹೊತ್ತಿನ ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರಿಗೆ ಮಣಿದ ಐಆರ್‌ಬಿ, ಟೋಲ್‌ ಸಂಗ್ರಹವನ್ನ ಸ್ಥಗಿತಗೊಳಿಸಿತ್ತು.

ಸಂಜೆಯವರೆಗೆ ಐಆರ್‌ ಬಿ ಯಾವುದೇ ವಾಹನಗಳಿಂದ ಟೋಲ್ ವಸೂಲಿ (Toll Collection Commencement) ಮಾಡದ ಕಾರಣ ವಾಹನ ಸವಾರರು ಟೋಲ್ ಕಿರಿಕಿರಿ ಇಲ್ಲದೇ ಪ್ರಯಾಣಿಸಿದ್ದರು. ಆದರೆ ರಾತ್ರಿಯ ವೇಳೆಗೆ ಮತ್ತೆ ಟೋಲ್‌ ಸಂಗ್ರಹವನ್ನ ಐಆರ್‌ಬಿ ಎಂದಿನಂತೆ ಆರಂಭಿಸಿದೆ..

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಬಲಿಂಗ ಕವಳಿ ಕಟ್ಟಿ, ಟೋಲ್‌ ಗೇಟ್ ಕುರಿತು ಜಿಲ್ಲಾಡಳಿತ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸಾರ್ವಜನಿಕರು ಬೆಳಿಗ್ಗೆ ಪ್ರತಿಭಟನೆ ನಡೆಸಿ ಟೋಲ್‌ ಸಂಗ್ರಹ ಸ್ಥಗಿತಗೊಳಿಸಿದ್ದಾರೆಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ. ಮು೦ದುವರಿದ ಅವರು, ಐಆರ್‌ಬಿಯವರು ಪಿಟೈಸ್ ಸರ್ಟಿಫಿ ಕೇಟ್ ಒಂದನ ಸಲ್ಲಿಸಲು ಭೇಟಿಯಾಗಿದ್ದರು.

ಆದರೆ ಐಆರ್‌ಬಿ ಕಂಪನಿ ಕೇವಕ ಗುತ್ತಿಗೆದಾರರಷ್ಟೇ. ಹೀಗಾಗಿ ಅವರ ಫಿಟ್ಟೆಸ್ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ತಾವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸರ್ಟಿಫಿಕೇಟ್‌ ಸಲ್ಲಿಸಿ, ಅಲ್ಲಿಂಯವರೆಗೆ ಸುರಂಗ ಮಾರ್ಗ ತೆರೆಯಲು ಅವಕಾಶವಿಲ್ಲ. ಸಾರ್ವಜನಿಕರ ಜೀವವನ್ನ ಅಪಾಯದಲ್ಲಿ ಸಿಲುಕಿಸಲು ಜಿಲ್ಲಾಡಳಿತ ಸಿದ್ಧವಿಲ್ಲ. ಎಂದು ತಿಳಿಸಿದ್ದೇನೆ ಎಂದು ಹೇಳಿದ್ದಾರೆ.