ಸುದ್ದಿಬಿಂದು ಬ್ಯೂರೋ
ಅಂಕೋಲಾ :ಉತ್ತರಕನ್ನಡ ಸಂಸದರಾಗಿರುವ ಅನಂತಕುಮಾರ ಹೆಗಡೆ ಕ್ಷೇತ್ರದ ಮತದಾರರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆಂದು ಸಚಿವ ಮಧು ಬಂಗಾರಪ್ಪ ಅವರು ಅನಂತಕುಮಾರ ಹೆಗಡೆ ವಿರುದ್ದ ಕಿಡಿಕಾರಿದ್ದಾರೆ.
ಅವರು ಇಂದು ಅಂಕೋಲಾಕ್ಕೆ ಆಗಮಿಸಿದ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾಲ್ಕುವರೆ ವರ್ಷ ದಿಕ್ಕು ದಸೆ ಇಲ್ಲದ ಅನಂತಕುಮಾರ ಹೆಗಡೆ ಮತ್ತೆ ಬಂದಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಸಾವಿಲ್ಲಿ ಜಿಲ್ಲೆಯಲ್ಲಿ ರಾಜಕೀಯ ಮಾಡಿದ್ದರು. ಮತದಾರರಿಗೆ ವಿಶ್ವಾಸ ದ್ರೋಹ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ದೇಷವನ್ನ ಜನರ ಮನಸ್ಸಿನಲ್ಲಿ ಮೂಡಿಸುತ್ತಿರುವುದು ಕಂಡನೀಯ.
ನಾವು ಸುಮ್ಮನೇ ಕೂರುವುದಿಲ್ಲ.
ಮುಂದೆ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಬುದ್ದಿ ಕಲಿಸುತ್ತೇವೆ.ನಾಲ್ಕುವರೆ ವರ್ಷ ಹೆಬ್ಬಾವಿನ ರೀತಿಯಲ್ಲಿ ಮಲಗಿದ್ದ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೇಟ್ ಕೊಡಬೇಕು.ಅವರನ್ನ ಸೋಲಿಸಿ ಸಂವಿಧಾನ ಉಳಿಸುವ ಜವಬ್ದಾರಿ ಜನರ ಮೇಲಿದೆ. ನಾಲ್ಕು ವರ್ಷ ಯಾವಾಗ ಜನರ ಕೈಗೆ ಅವರು ಸಿಕ್ಕಿದ್ದಾರೆ. ಧರ್ಮ ಧರ್ಮದ ನಡುವೆ ಜಗಳ ತರುತ್ತಿರುವವರಿಗೆ ಬುದ್ದಿ ಕಲಿಸಬೇಕಾಗಿದೆ ಎಂದರು.