ಸುದ್ದಿಬಿಂದು ಬ್ಯೂರೋ
ಕುಮಟಾ :ಉತ್ತರಕನ್ನಡ ಜಿಲ್ಲೆಯ ಜೆಡಿಎಸ್ ನ ಪ್ರಭಾವಿ ಮುಖಂಡ ಸೂರಜ್ ನಾಯ್ಕ ಸೋನಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ‌ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿರುವ ಬೆನ್ನಲೆ ದಿಢೀರ್ ಆಗಿ ಕಾಂಗ್ರೆಸ್ ನಾಯಕರ ಸಮುಖದಲ್ಲಿ ಕಾಣಿಸಿಕೊಂಡಿರುವುದು ಕಾಂಗ್ರೆಸ್ ಸೇರ್ಪಡೆ ಮತ್ತಷ್ಟು ಪುಷ್ಠಿ ನೀಡುವಂತಾಗಿದೆ.
.

(ಸಚಿವ ಮಧು ಬಂಗಾರಪ್ಪ ಅವರ ಕಾರನಲ್ಲಿ ತೆರಳಿದ ಸೂರಜ್ ನಾಯ್ಕ ಸೋನಿ)

ಹೌದು ರಾಜ್ಯ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪ ಅವರು ಇಂದು ಕಾರ್ಯಕ್ರಮದ ಅಂಗವಾಗಿ ಅಂಕೋಲಾಕ್ಕೆ ಆಗಮಿಸಿದ್ದು,ಈ ವೇಳೆ ಸೂರಜ‌ ನಾಯ್ಕ ಸೋನಿ ಕೂಡ ಸಚಿವರ ಸರಕಾರಿ ವಾಹನದಲ್ಲೆ ಜೊತೆಯಲ್ಲಯೇ ಕುಮಟಾದಿಂದ ಅಂಕೋಲಾ ತನಕ ತೆರಳಿದ್ದರು.ಇನ್ನೂ ಅಂಕೋಲಾದ ಪ್ರವಾಸಿ ಮಂದಿರದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಟಿಯನ್ನ ನಡೆಸಿದ್ದು, ಅಲ್ಲಿಯೂ ಕೂಡ ಸೂರಜ್ ನಾಯ್ಕ ಸೋನಿ ಅವರು ಮಾಧ್ಯಮದವರ ಎದುರಲ್ಲೆ ಮಧು ಬಂಗಾರಪ್ಪ ಅವರ ಜೊತೆ ಸೂರಜ್ ನಾಯ್ಕ ಸೋನಿ ಕಾಣಿಸಿಕೊಂಡಿದ್ದಾರೆ.

ಸೂರಜ್ ನನ್ನ ಆಪ್ತರು : ಮಧು ಬಂಗಾರಪ್ಪ
ಇನ್ನೂ ಈ ಬಗ್ಗೆ ಸೂರಜ್ ನಾಯ್ಕ ಅವರು ಕಾಂಗ್ರೆಸ್ ಗೆ ಸೇರ್ಪಡೆ ಆಗಲಿದ್ದಾರೆ ಎಂದು ಮಾಧ್ಯದವರು ಮಧು ಬಂಗಾರಪ್ಪ ಅವರನ್ನ ಪ್ರಶ್ನಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ..ಪಕ್ಷಕ್ಕೆ ಬರುವಂತೆ ಮೊದಲಿನಿಂದಲ್ಲೂ ನಾನು ಸೂರಜ್ ಗೆ ಹೇಳತ್ತಾನೆ ಬಂದಿದ್ದೆನೆ‌. ಯಾಕೋ ಅವರು ಮನಸ್ಸು ಗಟ್ಟಿ ಮಾಡಿಲ್ಲ. ಅವರು ನನ್ನ ಆಪ್ತರು, ಜಿಲ್ಲೆಗೆ ಅವರತಂಹ ನಾಯಕತ್ವ ಇರುವವರು ಪಕ್ಷಕ್ಕೆ ಬೇಕು, ಸೂರಜ್ ಪಕ್ಷಕ ಬಂದರೆ ಯಾವತ್ತು ನಮ್ಮ ಸ್ವಾಗತ ಇದೆ ಎಂದು ಹೇಳಿದ್ದರು.

ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ : ಸೂರಜ್ ನಾಯ್ಕ
ಮಧು ಬಂಗಾರಪ್ಪ ಅವರನ್ನ ವೈಯುಕ್ತಿಕವಾಗಿ ಸಿಗೋದಕ್ಕೆ ಅಂತಾ ಬಂದಿದ್ದೇನೆ. ಮಧು ಬಂಗಾರಪ್ಪ ಅವರನ್ನ ರಾಜಕಾರಣಿಗಿಂತಾ ಹೆಚ್ಚಾಗಿ ಮಾನವೀಯ ಮೌಲ್ಯವನ್ನ ಇಟ್ಟುಕೊಂಡರು.ರಾಷ್ಟ್ರೀಯ ಪಕ್ಷಕ್ಕೆ ಸೇರಬೇಕು ಎನ್ನುವ ವಿಚಾರವೇನೋ ಇದೆ.ಆದರೆ ಈ ಬಗ್ಗೆ ಪಕ್ಷದ ಹಿರಿಯರ ಬಗ್ಗೆ ಚರ್ಚೆ ಮಾಡಿ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಮಾಡಲಿದ್ಧೇನೆ.