ಸುದ್ದಿಬಿಂದು ಬ್ಯೂರೋ
ಕಾರವಾರ : ನಾಡಿದ್ದು ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಉತ್ತರಕನ್ನಡ ಜಿಲ್ಲೆಯ ಪದ್ಮಶ್ರೀ ಪುರಸ್ಕೃತರಾಗಿರುವ ಇಬ್ಬರೂ ಮಹಿಳೆಯರಿಗೆ ವಿಶೇಷ ಆಹ್ವಾನ ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಕ್ರಿ ಬೊಮ್ಮು ಗೌಡ ಹಾಗೂ ತುಳಸಿ ಗೌಡಗೆ ಆಹ್ವಾನ ಪತ್ರಿಕೆ ತಲುಪಿದೆ. ರಾಷ್ಟ್ರ ವ್ಯಾಪ್ತಿಯ ರಾಮ ಮಂದಿರದ ಉದ್ಘಾಟನೆಗೆ ವಿಶೇಷ ಆಹ್ವಾನ‌ಪತ್ರಿಕೆ ಇದಾಗಿದೆ. ಇನ್ನೂ ಆಹ್ವಾನ ಪತ್ರಿಕೆ ಬಂದಿರುವ ಬಗ್ಗೆ ಇಬ್ಬರೂ ಪುರಸ್ಕೃತರು ಸಂತಸ ವ್ಯಕ್ತಪಡಿಸಿದ್ದಾರೆ.