www.suddibindu.in
ಭದ್ರಾವತಿ: ರಾತ್ರಿ ವೇಳೆ ಊಟ ಮಾಡಿ ಮನೆಯವರ ಜೊತೆಯಲ್ಲೇ ಮಲಗಿದ್ದ ವ್ಯಕ್ತಿ ಓರ್ವ ಮನೆಯಿಂದ ನಾಪತ್ತೆಯಾಗಿ ವಾರ ಕಳೆದರು ಇದುವರೆಗೂ ವಾಪಸ್ ಆಗದೆ ನಾಪತ್ತೆಯಾಗಿರುವ ಬಗ್ಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
68 ವರ್ಷದ ಚೆನ್ನಕೇಶವ ಎಂಬುವವರು ನಾಪತ್ತೆಯಾಗಿದ್ದವರಾಗಿದ್ದಾರೆ. ಇವರು ಈ ಹಿಂದೆ ಗುತ್ತಿಗೆದಾರರಿ ಕೆಲಸ ಮಾಡುತ್ತಿದ್ದು, ಕಳೆದ ಕೆಲ ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ಉಳಿದು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಇವರು ಜುಲೈ 3 2024ರಂದು ರಾತ್ರಿ ವೇಳೆ ಮನೆಯಲ್ಲಿ ಎಲ್ಲರ ಜೊತೆಯಲ್ಲಿ ಊಟ ಮಾಡಿ ಮಲಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ
- ರಾಮತೀರ್ಥ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ, ಮಕ್ಕಳ ರಕ್ಷಣೆ:ಗೋಕರ್ಣದಲ್ಲಿ ಅಚ್ಚರಿ ಘಟನೆ
- ನಿತ್ಯವೂ ರಸ್ತೆ ಮಧ್ಯೆ ಕೆಟ್ಟು ನಿಲ್ಲುವ ಕೆಎಸ್ಆರ್ಟಿಸಿ ಬಸ್ : ಪ್ರಯಾಣಿಕರು ಹೈರಾಣ
- ಮಗುವೇ ಸಾಲ ತೀರಿಸುವ ಸಾಧನವಾಗಿದೆಯಾ.?ಮನಕಲಕಿಸುವ ಪೋಷಕರ ನಿರ್ಧಾರ
ಮರುದಿನ ಬೆಳಿಗ್ಗೆ ಮನೆಯವರು ಎದ್ದು ನೋಡಿದಾಗ ಚೆನ್ನಕೇಶವ ಮನೆಯಲ್ಲಿ ಇರಲಿಲ್ಲ.ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ.ನಾಪತ್ತೆಯಾಗಿರುವ ಚೆನ್ನಕೇಶ ಕನ್ನಡ ಭಾಷೆ ಮಾತನಾಡುತ್ತಿದ್ದು, ದುಂಡುಮುಖ, ದೃಢಮೈಕಟ್ಟು, ಎಣ್ಣೆಗಪ್ಪು ಮೈ ಬಣ್ಣ, 5.2″ ಎತ್ತರವಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೆಕ್ಸ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.ನಾಪತ್ತೆಯಾಗಿರುವ ನನ್ನ ತಂದೆಯನ್ನ ಪತ್ತೆ ಹಚ್ಚಿಕೊಡುವಂತೆ ಅವರ ಮಗ ಜ್ನಾನೇಶ್ ಸಿ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಒಂದು ವೇಳೆ ಇವರ ಪತ್ತೆಯಾದಲ್ಲಿ 8147997909 ಅಥವಾ 9590402999 ಈ ನಂಬರ್ಗೆ ಕರೆ ಮಾಡುವಂತೆ ತಿಳಿಸಲಾಗಿದೆ.