ಸುದ್ದಿಬಿಂದು ಬ್ಯೂರೋ
ಕುಮಟಾ :ಇಲ್ಲಿನ ಕೈಗಾರಿಕಾ ವಲಯದಲ್ಲಿರುವ ಜಾನಕಿ ರಾಮ ವೃದ್ಧಾಶ್ರಮ ನಡೆಸುತ್ತಿದ್ದ ಸ್ಥಳಕ್ಕೆ ರಾತ್ರಿವೇಳೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆ ಹಾಗೂ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ದುರ್ಗಾಕಾಲೋನಿ ಸಮೀಪದ ಕೈಗಾರಿಕಾ ವಲಯದಲ್ಲಿ ನಡೆದಿದೆ.

ಆಶಾ ವಸಂತ ನಾಯ್ಕ ಎಂಬುವವರು ತಮ್ಮ ಮನೆಯಲ್ಲೆ ಕಳೆದ ಐದು ವರ್ಷಗಳಿಂದ ವೃದ್ಧಾಶ್ರಮ ಹಾಗೂ ಆನಾಥಾಶ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಸದ್ಯ ಇವರ ಆಶ್ರಮದಲ್ಲಿ 20ಮಂದಿ ವೃದ್ಧರು ಹಾಗೂ 5ಮಂದಿ ಅನಾಥರಿಗ ಅರೈಕೆ ಮಾಡಲಾಗುತ್ತಿದೆ. ಅಷ್ಟೆ ಅಲ್ಲದೆ ಕಳೆದ ಒಂದು ವರ್ಷದದ ಇವರು ಗೋ ಶಾಲೆಯನ್ನ ಕೂಡ ಆರಂಭಿಸಿದ್ದಾರೆ. ಪ್ರಮುಖವಾಗಿ ಅಪಘಾತದಲ್ಲಿ ಗಾಯಗೊಡ ಗೋವುಗಳನ್ನ ತಂದು ಆರೈಕೆ ಮಾಡಲಾಗುತ್ತಿದೆ.

ಇವರ ಉತ್ತಮ ಕಾರ್ಯವನ್ನ ನೋಡಿದ ಭಗವಾನ್ ದಾಸ್ ಬಾಠಿ ಎಂಬುವವರು ಆಶ್ರಮ ನಡೆಸುತ್ತಿರುವ ಆಶಾ ನಾಯ್ಕ ಅವರಿಗೆ ಅರ್ಥ ಏಕರೆ ಜಾಗವನ್ನ ದಾನ ಮಾಡಿದ್ದರು, ಆಶಾ ನಾಯ್ಕ ಈ ಜಾಗದಲ್ಲಿ ಗೋವುಗಳನ್ನ ಕಟ್ಟಿದ್ದರು. ಗೋವುಗಳನ್ನ ಕಟ್ಟಿರುವ ಜಾಗದ ತನಗೆ ಸೇರಿದ್ದು ಎಂದು ಗೋಪಾಲ ಗುನಗಾ ಎಂಬಾತ ರಾತ್ರಿ 10-30ಸುಮಾರಿಗೆ ಐವರ ಗುಂಪು ಕಟ್ಟಿಕೊಂಡು ಅಕ್ರಮವಾಗಿ ಆಶಾ ನಾಯ್ಕ ಅವರಿಗೆ ಸೇರದ್ದ ಜಮೀನಿನ ಒಳಗೆ ನುಗ್ಗಿದ್ದಾರೆ ಎನ್ನಲಾಗಿದೆ.

ಇದನ್ನ ಪ್ರಶ್ನೆ ಮಾಡಲು ಬಂದ ಆಶಾ ನಾಯ್ಕ ಹಾಗೂ ಯುವಕನಿಗೆ ವಿನಾಯಕ ಗೋಪಾಲ ಗುನಗಾ ಹೆಗಡೆ, ಹಾಗೂ ಆತನ ಜೊತೆಯಲ್ಲಿ ಬಂದವರು ಅವಾಚ್ಯ ಶಬ್ಧದಗಳಿಂದ ಬೈದು ನಿಂದನೆ ಮಾಡಿ ಮಹಿಳೆಯ ಮೈಮೆಲೆ ಕೈ ಹಾಕಿ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ.ಅಷ್ಟೆ ಅಲ್ಲದೆ ಭಗವಾನ್ ದಾಸ್ ಬಾಠಿ ಕೊಟ್ಟಿರುವ ಜಾಗ ಅದು ನನ್ಮದು ಬಿಟ್ಟುಕೊಡದೆ ಹೋದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇನ್ನೂ ಇವರು ಅಕ್ರಮವಾಗಿ ಜಮೀನಿನೊಳಗೆ ನುಗ್ಗಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಆಶಾ ನಾಯ್ಕ ದೂರು ನೀಡಿದ್ದಾರೆ.