ಸುದ್ದಿಬಿಂದು ಬ್ಯೂರೋ
ಶಿರಸಿ :
ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ನಿಗದಿ ಮಾಡಿದ್ದ‌ ಖರ್ಚಿಗಿತ ಅಭ್ಯರ್ಥಿಗಳು ಹಾಗೂ ಗೆದ್ದ ಶಾಸಕರು ಖರ್ಚು ಮಾಡಿರುವುದು ಬೆಳಕಿಗೆ ಬಂದಿದ್ದು, ಗೆದ್ದಿರುವ ಶಾಸಕರನ್ನ ಅನರ್ಹಗೊಳಿಸಿ‌ ಮರು ಚುನಾವಣೆ ನಡೆಸಬೇಕು ಇಲ್ಲದೆ ಹೋದರೆ ಹೈ ಕೋರ್ಟ ನಲ್ಲಿ ಮೊಕ್ಕದ್ದಮೆ ದಾಖಲಿಸಿ ಕಾನೂನು ಹೋರಾಟ ಮಾಡುವುದಾಗಿ ಸಾಮಾಜಿಕ ಹೋರಾಟಗಾರ ಪ್ರಸನ್ನ ನಾಯ್ಕ್ ಮತ್ತು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಕಾನೂನು ವಿಭಾಗದ ಮುಖ್ಯಸ್ಥ ವಕೀಲ ಎಂ ಏನ್ ನಾಯ್ಕ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಪ್ರಧಾನ ಮಂತ್ರಿ ಮೋದಿಯವರ ಕಾರ್ಯಕ್ರಮಕ್ಕೆ ಜನ ಸೇರಿಸಲು ಉತ್ತರ ಕನ್ನಡ ಬಿಜೆಪಿಯು KSRTC ಶಿರಸಿ ವಿಭಾಗೀಯ ಕಚೇರಿಯಿಂದಲೇ ಅಧಿಕೃತವಾಗಿ 100 ಬಸ್ ಗಳನ್ನು ಮತ್ತು ಗೋವಾ ರಾಜ್ಯದಿಂದಲೂ ಗೋವಾ ರಾಜ್ಯ ಸಾರಿಗೆ ಕದಂಬ ಬಸ್ ಗಳನ್ನು ಬುಕ್ ಮಾಡಿಸಿ ಅವುಗಳಲ್ಲಿ ಜನರನ್ನು ಕರೆತಂದಿದೆ,
ಇದು ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯಲ್ಲಿ ಬಸ್ ಗಳನ್ನು ಕಾಯ್ದಿರಿಸಿದವರ ಮಾಹಿತಿಯು ಸಿಕ್ಕಿದೆ.ಚುನಾವಣ ಆಯೋಗ ನೇಮಕ ಮಾಡಿದ ಫ್ಲೈಯಿಂಗ್ squad ಮತ್ತು VST ಟೀಮ್ ರೆಕಾರ್ಡ್ ಮಾಡಿದ ವಿಡಿಯೋ ಸಹಿತ ವರದಿಯಂತೆ ಶಿರಸಿಯ ಉಪವಿಭಾಗಾಧಿಕಾರಿ/ ಚುನಾವಣಾ ಅಧಿಕಾರಿ ಇವರು ಈ ಕುರಿತು 100ಬಸ್ ಗಳ ವೆಚ್ಚದ ವರದಿಯನ್ನ ಪೂರೈಸುವಂತೆ ಅಧಿಕೃತವಾಗಿ ಜಿಲ್ಲಾ ಬಿಜೆಪಿಗೆ ನೋಟಿಸ್ ನೀಡಿದ್ದು ಬುಕ್ ಮಾಡಿದ ಎಲ್ಲಾ ಬಸ್ ಗಳು ಹಟ್ಟಿಕೇರಿಯಲ್ಲಿ ನಡೆದ ಪ್ರಧಾನಿಯವರ ಚುನಾವಣ ಪ್ರಚಾರ ಕಾರ್ಯಕ್ರಮಕ್ಕೆ ಹೋಗಿರುವ ನಿಖರ ಮಾಹಿತಿ ಇದ್ದಾಗಲೂ ಜಿಲ್ಲೆಯ ಆರು ಕ್ಷೇತ್ರದ ಚುನಾವಣ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು,Accounts Genrel observer ಗಳು ಚುನಾವಣಾ ಮಾರ್ಗದರ್ಶಕ ನಿಯಮಗಳನ್ನು ಗಾಳಿಗೆ ತೂರಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಶಾಸಕರನ್ನ ಅನರ್ಹತೆಯ ತೂಗುಗತ್ತಿಯಿಂದ ರಕ್ಷಿಸುವ ಕಾರ್ಯ ಮಾಡಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ.

ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿದ್ದಾಗ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ವ್ಯವಸ್ಥೆ ಮಾಡುವ ಪ್ರತಿಯೊಂದು ವ್ಯವಸ್ಥೆಗೂ ಚುನಾವಣಾ ಆಯೋಗ ತನ್ನದೇ ಆದ ಬೆಲೆ ನಿಗದಿಪಡಿಸಿ ಅಭ್ಯರ್ಥಿಗಳ ಚುನಾವಣ ಖರ್ಚಿಗೆ ಸೇರ್ಪಡೆ ಮಾಡುತ್ತದೆ,ಅಭ್ಯರ್ಥಿಗಳಿಗೆ ತಮ್ಮ ಅಭಿಮಾನಿಗಳು ಯಾವುದೇ ರೀತಿಯ ಶಾಲು, ಪೇಟ, ಹಾರ, ಊಟದ ವ್ಯವಸ್ಥೆ ಮಾಡಿದಿದ್ದರೂ ಅದು ಅಭ್ಯರ್ಥಿಗಳ ಖರ್ಚಿಗೆ ಸೇರುತ್ತದೆ.


ಹೀಗಿರುವಾಗ ಅಂಕೋಲಾ ಹಟ್ಟಿಕೆರೆ ಬಳಿ ನಡೆದ ಮೋದಿ ಕಾರ್ಯಕ್ರಮದ ಖರ್ಚು ಸುಮಾರು ಎರಡುವರೆ ಕೋಟಿಯಾಗಿದ್ದು ಕಾರ್ಯಕ್ರಮದ ವೇದಿಕೆಯಲ್ಲಿ ಬಿಜೆಪಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಉಪಸ್ಥಿತರಿದ್ದ ಆರು ಅಭ್ಯರ್ಥಿಗಳಿಗೆ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಮಾನವಾಗಿ ಹಂಚಿದರೆ ತಲಾ 41 ಲಕ್ಷ್ಯದವರೆಗೂ ಇದೊಂದೇ ಕಾರ್ಯಕ್ರಮದ ವೆಚ್ಚ ಸೇರುತ್ತದೆ, ಜೊತೆಗೆ ಪ್ರತಿ ಅಭ್ಯರ್ಥಿಯ ವಯುಕ್ತಿಕ ವೆಚ್ಚ ಒಂದಿಷ್ಟು ಲಕ್ಷ್ಯಗಳಲ್ಲೇ ಇವೆ.ಚುನಾವಣ ಆಯೋಗ ಪಾರದರ್ಶಕವಾಗಿ ನಿರ್ವಹಿಸಿದ್ದಲ್ಲಿ ಬಿಜೆಪಿಯ ನಾಲ್ಕು ಪರಾರ್ಜಿತ ಅಭ್ಯರ್ಥಿಗಳು ಮತ್ತು ಇಬ್ಬರೂ ಶಾಸಕರ ತಲೆದಂಡ ಖಚಿತವಾಗಿತ್ತು.

ಆದರೆ ಚುನಾವಣ ಆಯೋಗ ಕಾರ್ಯಕ್ರಮ ಮುಗಿದು, ಚುನಾವಣೆಯು ಮುಗಿದು ಒಂದು ತಿಂಗಳಾದ ನಂತರ ಜಿಲ್ಲಾ ಬಿಜೆಪಿಯನ್ನು ರಕ್ಷಿಸುವ ಸಲುವಾಗಿ 192 ಜನ ಬಿಜೆಪಿ ಕಾರ್ಯಕರ್ತರ ಮೇಲೆ FIR ಮಾಡಿ ಸುಮಾರು 1 ಕೋಟಿ ಮೂವತ್ತು ಲಕ್ಷ್ಯ ರೂ ಗಳ ಬಸ್ ಕಾಯ್ದಿರಿಸಿದ ಮೊತ್ತವನ್ನು ಅಭ್ಯರ್ಥಿಗಳ ವೆಚ್ಚದಲ್ಲಿ ಕಡಿಮೆ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನ ಚುನಾವಣಾ ಕಾನೂನುಬ ಸಂಕೋಲೆಗಳಿಂದ ಪಾರು ಮಾಡುವ ಕೆಲಸಕ್ಕೆ ನಿಂತಿದೆ.
ಜಿಲ್ಲೆಯಲ್ಲಿರುವ ಹೆಚ್ಚಿನ ಉನ್ನತ ಅಧಿಕಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ರೀತಿಯ ಲಾಭಿಗಳ ಮೂಲಕ ಜಿಲ್ಲೆಗೆ ಬಂದಂತವರು,ಅವರುಗಳೇ ಚುನಾವಣೆಯಲ್ಲಿ ಮುಖ್ಯ ಅಧಿಕಾರಿಗಳು ಆದಾಗ ಪಾರದರ್ಶಕತೆ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.


ಇವೆಲ್ಲದರಲ್ಲಿ ಚುನಾವಣ ಆಯೋಗದ ಲೋಪದೋಷ ಮತ್ತು ಹೊಂದಾಣಿಕೆ ಕಂಡುಬರುವುದರಿಂದ ಹಾಗೂ ಜಿಲ್ಲೆಯ ಬಿಜೆಪಿಯ ಅಭ್ಯರ್ಥಿಗಳ ಚುನಾವಣಾ ವೆಚ್ಚ ಚುನಾವಣ ಮಾರ್ಗದರ್ಶಿಯ ನಿಗದಿತ ಮಿತಿಯನ್ನು ದಾಟಿರುವುದರಿಂದ ಚುನಾವಣೆಯಲ್ಲಿ ಅಕ್ರಮ ಕಂಡುಬಂದಿರುತ್ತದೆ, ಆದ್ದರಿಂದ ಆರು ಅಭ್ಯರ್ಥಿಗಳ ಮೇಲೆ ಕಾನೂನು ಕ್ರಮಕ್ಕಾಗಿ ಮತ್ತು ವಿಶೇಷವಾಗಿ ಎರಡು ಬಿಜೆಪಿ ಶಾಸಕರನ್ನು ಆ ಸ್ಥಾನದಿಂದ ಅನರ್ಹಗೊಳಿಸಿ ಮರು ಚುನಾವಣೆ ನಡೆಸುವಂತೆ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳ ಮೇಲೆ ಹೈ ಕೋರ್ಟ್ ನಲ್ಲಿ ಮೊಕ್ಕದ್ದಮೆ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.