ಸುದ್ದಿಬಿಂದು ಬ್ಯೂರೋ
ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 66ರ ಅವರ್ಸಾದಲ್ಲಿ ಇತ್ತೀಚಿನ ದಿನದಲ್ಲಿ ವಾಕಿಂಗ್ ಮಾಡುವ ಸಮಯದಲ್ಲಿ ಹೆಚ್ಚಿನ ಅಪಘಾತಗಳು ಸಂಬಂಧಿಸಿ ಸಾವು, ನೋವುಗಳಾಗುತ್ತಿರುವ ಹಿನ್ನಲೆಯಲ್ಲಿ ಹೆದ್ದಾರಿಯಲ್ಲಿ ವಾಕಿಂಗ್ ‌ಮಾಡದಂತೆ ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಲಾಗಿದೆ.

ಡಿಸೆಂಬರ್ 26, 2023 ರಂದು ಅವರ್ಸಾ ಕಾತ್ಯಾಯನಿ ಹೈಸ್ಕೂಲು ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರ ಮೇಲೆ ವಾಕಿಂಗ್ ಮಾಡುತ್ತಿದ್ದ ಪಾದಾಚಾರಿಗೆ ಕಾರು ಡಿಕ್ಕಿ ಹೊಡೆದು ಮಹಿಳೆ ಓರ್ವಳು ಮೃತ ಪಟ್ಟಿದ್ದರು, ಇನ್ನೂ ಜನವರಿ 14, 2024ರಂದು ಕೊಟೆವಾಡ ಪಿಕಾಕ ರೆಸ್ಟೋರೆಂಟ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-66ರ ಮೇಲೆ ವಾಕಿಂಗ ಮಾಡುವಾಗ ಪಾದಾಚಾರಿ ಮೇಲೆ ವಾಹನ ಡಿಕ್ಕಿ ಹೊಡೆದು ಓರ್ವರು ಮೃತಪಟ್ಟಿದ್ದರು.

ಹೀಗಾಗಿ ಕತ್ತೆಯಲ್ಲಿ ವಾಕಿಂಗ್ ಮಾಡುವಂತಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ ಮಾಡುವುದುರಿಂದ ಅಫಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಪಾರ್ಕನಲ್ಲಿ, ಮೈದಾನಗಳಲ್ಲಿ ಹಾಗೂ ಸಾಮಾನ್ಯ ರಸ್ತೆಗಳಲ್ಲಿ ವಾಕಿಂಗ್ ಮಾಡಬಹುದಾಗಿದೆ.ಪಟ್ಟಣ ವ್ಯಾಪ್ತಿಯಲ್ಲಿ ಅತಿ ಹೆಚ್ಚು ವಾಹನ ಓಡಾಡುವ ರಸ್ತೆಗಳಲ್ಲಿ ವಾಕಿಂಗ ಮಾಡುವಂತಿಲ್ಲ ಎಂದು ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಲಾಗಿದೆ.