ಬೆಂಗಳೂರು : ಸೆಪ್ಟೆಂಬರ್ ಆರಂಭದೊಂದಿಗೆ, ಅನೇಕ ಹಣಕಾಸಿನ ಬದಲಾವಣೆಗಳು ಆಗಲಿದೆ. ಇದು ಬ್ಯಾಂಕ್ ರಜಾದಿನಗಳನ್ನು ಸಹ ಒಳಗೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜೆಗಳ ಪಟ್ಟಿಯನ್ನು ಮುಂಚಿತವಾಗಿ ಬಿಡುಗಡೆ ಮಾಡುತ್ತದೆ. ಸೆಪ್ಟೆಂಬರ್‌ನಲ್ಲಿಯೂ ಸಹ, ವಿವಿಧ ಹಬ್ಬಗಳು ಮತ್ತು ವಾರ್ಷಿಕೋತ್ಸವಗಳ ಕಾರಣ ಬ್ಯಾಂಕುಗಳಲ್ಲಿ ಹೆಚ್ಚಿನ ರಜೆಗಳಿವೆ.
ಗಣೇಶ ಚತುರ್ಥಿ, ಬರಾಫತ್, ಈದ್-ಎ-ಮಿಲಾದ್-ಉಲ್-ನಬಿ (ಮಿಲಾದ್-ಉನ್-ನಬಿ) ಮುಂತಾದ ವಿವಿಧ ಹಬ್ಬಗಳ ಕಾರಣದಿಂದ ಸೆಪ್ಟೆಂಬರ್‌ನಲ್ಲಿ ಬ್ಯಾಂಕ್‌ಗಳು ರಜಾದಿನಗಳಿಂದ ತುಂಬಿರುತ್ತವೆ. ಇದಲ್ಲದೆ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಪ್ರತಿ ಭಾನುವಾರವೂ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ತಿಂಗಳು ಬ್ಯಾಂಕ್‌ಗಳಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಪೂರ್ಣಗೊಳಿಸಬೇಕಾದರೆ,ರಜಾದಿನಗಳ ಪಟ್ಟಿಯನ್ನು ಇಲ್ಲಿಂದ ಪರಿಶೀಲಿಸಿ. ನಂತರ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಈ ತಿಂಗಳ ಒಟ್ಟು 30 ದಿನಗಳಲ್ಲಿ, 15 ದಿನಗಳವರೆಗೆ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಮುಚ್ಚಲ್ಪಡುತ್ತವೆ.
ಸೆಪ್ಟೆಂಬರ್ 4, 2024 – ಶ್ರೀಮಂತ ಶಂಕರದೇವ್ ತಿರೋಭವ ತಿಥಿ (ಗುವಾಹಟಿ)ಸೆಪ್ಟೆಂಬರ್ 7, 2024 – ಗಣೇಶ ಚತುರ್ಥಿ ಸೆಪ್ಟೆಂಬರ್ 8, 2024 – ಭಾನುವಾರ ಸೆಪ್ಟೆಂಬರ್ 14, 2024 – ಎರಡನೇ ಶನಿವಾರ ಸೆಪ್ಟೆಂಬರ್ 15, 2024 – ಭಾನುವಾರ ಸೆಪ್ಟೆಂಬರ್ 16, 2024 – ಬರವಾಫತ್ಸೆಪ್ಟೆಂಬರ್ 17, 2024 – ಮಿಲಾದ್-ಉನ್-ನಬಿ(ಗ್ಯಾಂಗ್ಟಾಕ್) ಸೆಪ್ಟೆಂಬರ್ 18, 2024 – ಪಾಂಗ್-ಲಹಬ್ಸೋಲ್ (ಗ್ಯಾಂಗ್ಟಾಕ್) ಸೆಪ್ಟೆಂಬರ್ 20, 2024 – ಈದ್-ಎ-ಮಿಲಾದ್-ಉಲ್-ನಬಿ (ಜೆಕೆ) ಸೆಪ್ಟೆಂಬರ್ 21, 2024 – ಶ್ರೀ ನಾರಾಯಣ ಗುರು ಸಮಾಧಿ ದಿನ ಸೆಪ್ಟೆಂಬರ್ 22, 2024 – ಭಾನುವಾರ ಸೆಪ್ಟೆಂಬರ್ 23, 2024 – ಮಹಾರಾಜ ಹರಿ ಸಿಂಗ್ (JK) ಜನ್ಮ ವಾರ್ಷಿಕೋತ್ಸವ ಸೆಪ್ಟೆಂಬರ್ 28, 2024 – ನಾಲ್ಕನೇ ಶನಿವಾರಸೆಪ್ಟೆಂಬರ್ 29, 2024 – ಭಾನುವಾರ
ಸೆಪ್ಟೆಂಬರ್ ತಿಂಗಳಲ್ಲಿ 15 ದಿನ ರಜೆಗಳಿದ್ದರೂ ಗ್ರಾಹಕರು ಆನ್‌ಲೈನ್ ಮೂಲಕ ವ್ಯವಹಾರ ನಡೆಸಬಹುದು. ಹಣ ಬೇಕಿದ್ದರೆ ಎಟಿಎಂ ಮೂಲಕ ಡ್ರಾ ಮಾಡಿಕೊಳ್ಳಬಹುದು. ಹಾಗಾಗಿ ಕ್ಯಾಶ್ ಸಮಸ್ಯೆ ಉಂಟಾಗಲ್ಲ. ರಜೆದಿನಗಳಲ್ಲಿಯೂ ಆನ್‌ಲೈನ್ ವ್ಯವಹಾರ ನಡೆಸಬಹುದು. ಎಟಿಎಂಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
ಇದನ್ನೂ ಓದಿ