suddibindu.in
ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದ ರಾಜಸ್ಥಾನದ (Rajasthan) ಮಾಜಿ ಆರಂಭಿಕ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ (Rohit shrma) ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.

ಅವರು ಕಳೆದ 4, 5 ದಿನಗಳಿಂದ ಲೀವರ್ ಸಮಸ್ಯೆ ಹೆಚ್ಚಾಗಿದ್ದು. ವೈದ್ಯರು (Doctor) ಸಾಕಷ್ಟು ಚಿಕಿತ್ಸೆ ನೀಡಿದರು ಸಹ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ಅವರು ರಾಜಸ್ಥಾನ ಪರವಾಗಿ ಹಲವು ರಣಜಿ ಪಂದ್ಯಗಳನ್ನು (Matches) ಆಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ (Treatment) ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ

ಇವರ ಹೆಸರು & ಟೀಮ್ ಇಂಡಿಯಾ ನಾಯಕನ ಹೆಸರೂ ಒಂದೇ ತರಹ ಇರುವುದರಿಂದ ಹಿಟ್ ಮ್ಯಾನ್ ಅಭಿಮಾನಿಗಳು ಶಾಕ್ ಆಗಿದ್ದರು. ಫೋಟೋ ನೋಡಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. ರಾಜಸ್ಥಾನದ ಮಾಜಿ ಆಟಗಾರ ತಮ್ಮ ವೃತ್ತಿಜೀವನದಲ್ಲಿ ಒಟ್ಟು 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿ. 166ರನ್ ಗಳಿಸಿದ್ದರು. ಇದಲ್ಲದೆ, ಇವರು 28ಲಿಸ್ಟ್ ಎ ಪಂದ್ಯಗಳನ್ನು ಸಹ ಆಡಿ. 35.41 ಸರಾಸರಿಯಲ್ಲಿ 850 ರನ್ ಗಳಿಸಿದ್ದರು. ಈ ಬಲಗೈ ಬ್ಯಾಟ್ಸ್‌ಮನ್ 4 ಟಿ-20 ಪಂದ್ಯಗಳಲ್ಲಿ ಭಾಗವಹಿಸಿ 32.75 ಸರಾಸರಿಯಲ್ಲಿ 131 ರನ್ ಗಳಿಸಿದ್ದಾರೆ