ಸುದ್ದಿಬಿಂದು ಬ್ಯೂರೋ ವರದಿ
ಹೊನ್ನಾವರ: ತಾಲೂಕಿನ ಮಾವಿನಕುರ್ವಾ ಗ್ರಾಮ
ಪಂಚಾಯತ ವ್ಯಾಪ್ತಿಯಲ್ಲಿ ಆರು ತಿಂಗಳ ಮಗು ಹೃದಯ ಕಾಯಿಲೆ ಸಮಸ್ಯೆಗೆ ಒಳಗಾಗಿದ್ದಳು.ಆ ಕುಟುಂಬಕ್ಕೆ ಸಚಿವ ಮಂಕಾಳ್ ವೈದ್ಯ ಅವರ ಪುತ್ರಿ ಬೀನಾ ವೈದ್ಯ ಅವರು ಮನೆಗೆ ಭೇಟಿ ನೀಡಿ 50 ಸಾವಿರ ಸಹಾಯ ಧನ ನೀಡುವ ಮೂಲಕ ಪುಟ್ಟ ಮಗುವಿನ ಕುಟುಂಬಕ್ಕೆ ನೆರವಾಗಿ ನಿಂತಿದ್ದಾರೆ.
ಹೃದಯ ಸಂಬಂಧಿಸಿದ ಕಾಯಿಲೆಗೆ ಒಳಗಾಗಿದ್ದ 6 ತಿಂಗಳ ಮಗುವಿನ ಚಿಕಿತ್ಸೆ ನೆರವು ನೀಡುವಂತೆ ಆಗ ಭಾಗದ ಯುವಕರು ಸಚಿವ ಮಂಕಾಳ ವೈದ್ಯ ಅವರ ಗಮನಕ್ಕೆ ತಂದಿದ್ದರು.ಸಚಿವರು ಸಹಾಯ ಮಾಡುವುದಾಗಿ ಯುವಕರಿಗೆ ಭರವಸೆ ನೀಡಿದ್ದರು , ಕೊಟ್ಟ ಮಾತಿನಂತೆ ಸಚಿವರ ಪುತ್ರಿ ಬೀನಾ ವೈದ್ಯ ಅವರು ಮಗುವಿನ ಕುಟುಂಬದವರಿಗೆ 50 ಸಾವಿರ ಸಹಾಯ ಮಾಡಿದ್ದಾರೆ..ಅಷ್ಟೆ ಅಲ್ಲದೆ ಆಸ್ಪತ್ರೆಯಲ್ಲಿನ ಬಿಲ್ ನೀಡುವಂತೆ ಕೇಳಿದ್ದು, ಮುಂದಿನ ದಿನದಲ್ಲಿಯೂ ನಿಮ್ಮ ಜೊತೆ ನಾವಿದ್ದೇವೆ.ಧೈರ್ಯವಾಗಿ ಇರಿ, ಎಂದು ಮಗುವಿನ ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ.
ಇದನ್ನೂ ಓದಿ