ಶಿರಸಿ : ಇಲ್ಲಿನ ಖಾಸಗಿ ಆಸ್ಪತ್ರೆಯ ಅನಾರೋಗ್ಯಕ್ಕೆ ಒಳಗಾಗಿ ಐಸಿಯುದಲ್ಲಿದ್ದ ಅಮ್ಮನೊಂದಿಗೆ ವೈದ್ಯೆ ಓರ್ವರು ಹಾಡು ಹೇಳಿ ಹೋಳಿ ಆಚರಿಸಿದ್ದಾರೆ.

ಅನಾರೋಗ್ಯದಿಂದ ತುರ್ತು ನಿಗಾ ಘಟಕದಲ್ಲಿದ್ದ ಅಮ್ಮನಿಗೆ ಬಣ್ಣ ಹಚ್ಚಿ ಹೋಳಿ ಸಂಭ್ರಮದ ಹಾಡು ಹೇಳುವ‌ ಮೂಲಕ ಮಗಳು ವೈದ್ಯೆ ಅಮ್ಮನ ಮೊಗದಲ್ಲಿ ಮಂದಹಾಸ ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಿರಸಿ ನಗರದ ಮಹಾಲಕ್ಷ್ಮೀ ನರ್ಸಿಂಗ್ ಹೋಮ್ ಪೆಥಾಲಜಿಸ್ಟ‌ ಡಾ.‌ಸುಮನ್ ದಿನೇಶ ಹೆಗಡೆ ಆಸ್ಪತ್ರೆಯಲ್ಲಿ ದಾಖಲಾದ ಅಮ್ಮನಿಗೆ ಚಿಕಿತ್ಸೆ‌ ಕೊಡಿಸುವ ಜೊತೆಗೆ ಅಪ್ಪ ಅಮ್ಮನ ಜೊತೆ ಅಮ್ಮನ ಆಶಯದಂತೆ ಹೋಳಿ ಆಚರಿಸಿ ಅನಾರೋಗ್ಯದ ನೋವಿನಲ್ಲೂ ಅಮ್ಮನ ಮೊಗದಲ್ಲಿ‌ ನಗು ತರಿಸಿದ್ದಾರೆ.

ಈ‌ ಮಾನವೀಯ ದೃಶ್ಯ ಹೋಳಿ ಸಂಭ್ರಮದಲ್ಲಿ ಆಸ್ಪತ್ರೆಯಲ್ಲಿ ಭಾವ ಕಟ್ಟಿಸಿತ್ತು.