ಬೆಂಗಳೂರು : ಇಂದು ಚಿನ್ನ ಖರೀದಿಸುವವರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಕಳೆದ ವಾರ ಸತತ ನಾಲ್ಕು ದಿನಗಳಿಂದ ಏರಿಕೆ ಕಂಡು ಹೊಸ ದಾಖಲೆ ನಿರ್ಮಿಸಿದ್ದ ಚಿನ್ನದ ಬೆಲೆ, ಸೋಮವಾರ ಸ್ವಲ್ಪ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹150 ಇಳಿಕೆಯಾಗಿದ್ದು, ಏಪ್ರಿಲ್ 14ರಂದು ಚಿನ್ನ ಮತ್ತು ಬೆಳ್ಳಿಯ ಪ್ರಸ್ತುತ ಬೆಲೆಯ ಮಾಹಿತಿ ಇಲ್ಲಿದೆ.
ಇಂದಿನ ಚಿನ್ನದ ದರ: ಅಮೆರಿಕದ ಆರ್ಥಿಕ ಹಿಂಜರಿತ ಮತ್ತು ಜಾಗತಿಕ ದೇಶಗಳ ನಡುವಿನ ಟ್ರೇಡ್ ವಾರ್ ಭೀತಿಯಿಂದ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಕಳೆದ ವಾರ ಸತತ ನಾಲ್ಕು ದಿನಗಳ ಕಾಲ ಬಂಗಾರದ ಬೆಲೆ ಏರಿ ಹೊಸ ದಾಖಲೆ ಬರೆದಿತ್ತು. ಆದರೆ ಇಂದು ಸೋಮವಾರ ತನ್ನ ಗರಿಷ್ಠ ಮಟ್ಟದಿಂದ ಇಳಿದಿದೆ ಮತ್ತು ಆಭರಣ ಖರೀದಿದಾರರಿಗೆ ಸ್ವಲ್ಪ ರಿಲೀಫ್ ನೀಡಿದೆ. ಏಪ್ರಿಲ್ 14ರಂದು ಹೈದರಾಬಾದ್‌ನ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಮಾಹಿತಿ ಇಲ್ಲಿದೆ.
ಚಿನ್ನದ ಬೆಲೆ ₹150 ಇಳಿಕೆ
ಬೃಹತ್ ನಗರದಾದ ಬೆಂಗಳೂರಿನಲ್ಲಿ ಇಂದು ಸೋಮವಾರ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹150 ಇಳಿಕೆಯಾಗಿದ್ದು ₹87,550ರಂತೆ ವಹಿವಾಟು ನಡೆಯುತ್ತಿದೆ. ಇದೇ ರೀತಿಯಲ್ಲಿ, 24 ಕ್ಯಾರೆಟ್ ಅಪರಂಜಿ ಚಿನ್ನದ ದರ ಪ್ರತಿ 10 ಗ್ರಾಂಗೆ ₹160 ಇಳಿಕೆಯಾಗಿದ್ದು ₹95,510 ರಲ್ಲಿ ವಹಿವಾಟು ನಡೆಯುತ್ತಿದೆ. ಕಳೆದ ನಾಲ್ಕು ಸೆಷನ್‌ಗಳಲ್ಲಿ ಚಿನ್ನದ ಬೆಲೆ ₹5,000 ಕ್ಕಿಂತ ಹೆಚ್ಚು ಏರಿಕೆ ಕಂಡು ದಾಖಲೆ ಬರೆದಿತ್ತು. ಈಗ ಅದು ಸ್ವಲ್ಪ ಇಳಿಕೆಯಾಗಿದೆ.
ಬೆಳ್ಳಿ ಬೆಲೆ ಸ್ಥಿರ
ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯಲ್ಲೂ ತೀವ್ರ ಏರಿಕೆ ಕಂಡುಬಂದಿತ್ತು. ಆದರೆ ಇಂದು ಸೋಮವಾರ ನಾಮಮಾತ್ರದ ಇಳಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ₹100 ಇಳಿಕೆಯಾಗಿ ₹99,900 ರಲ್ಲಿ ವಹಿವಾಟು ನಡೆಯುತ್ತಿದೆ. ಹೈದರಾಬಾದ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಸ್ಥಿರವಾಗಿದ್ದು, ಪ್ರತಿ ಕೆಜಿಗೆ ₹1.10 ಲಕ್ಷದಂತೆ ವಹಿವಾಟು ನಡೆಯುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರಿಕೆಯಾಗುತ್ತಿದೆ. ಅದು ಮತ್ತೆ ದಾಖಲೆ ಮಟ್ಟ ದಾಟುವ ಹಂತದಲ್ಲಿದೆ. ಇಂದು ಸ್ಪಾಟ್ ಚಿನ್ನದ ದರ ಔನ್ಸ್‌ಗೆ $3230 ರಂತೆ ವಹಿವಾಟು ನಡೆಯುತ್ತಿದ್ದು, ಸ್ಪಾಟ್ ಬೆಳ್ಳಿ ದರ $32 ಕ್ಕಿಂತ ಹೆಚ್ಚು ಇದೆ. ಮತ್ತೊಂದೆಡೆ, ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ₹86.015 ರಲ್ಲಿ ವಹಿವಾಟು ನಡೆಯುತ್ತಿದೆ.
ಇದನ್ನೂ ಓದಿ
- Gold /20ಲಕ್ಷ ಮೌಲ್ಯದ ಬಂಗಾರದ ಆಭರಣ ಮಾಲೀಕರಿಗೆ ತಲುಪಿಸಿದ ಹುಸೇನ್ ಶೇಕ್
- ಬೆಳ್ಳಂಬೆಳಗ್ಗೆ ದಾಂಡೇಲಿಯಲ್ಲಿ ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಿದ ಪಡೆ
- ಕಾರವಾರದಲ್ಲಿ ಕೊಲೆ ಆರೋಪಿ ಮೇಲೆ ಪೊಲೀಸ್ ಫೈರಿಂಗ್
- ಮೇ 4ರಿಂದ 5 ದಿನಗಳ ಕರಾವಳಿ ಉತ್ಸವ : ಅಧಿಕೃತ ಘೋಷಣೆ, ಮೊದಲ ದಿನ ಆಗಮಿಸಲಿರು ಗಾಯಕ ಸೋನು ನಿಗಮ್