ಸುದ್ದಿಬಿಂದು ಬ್ಯೂರೋ ವರದಿ
ಜೋಯಿಡಾ : ಜೋಯಿಡಾ – ದಾಂಡೇಲಿ ರಸ್ತೆಯ ಜನತಾ ಕಾಲೋನಿ ಬಳಿ ಕಾರು ಮತ್ತು ಬೊಲೆರೊ ಕ್ಯಾಂಪರ್ ವಾಹನ ಪರಸ್ಪರ ಡಿಕ್ಕಿಯಾಗಿ ಆರು ಮಂದಿ ಗಾಯವಾಗಿ, ಅದರಲ್ಲಿ ಮೂವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆಂದು ಬಂದಿದ್ದ 06 ಜನರಿದ್ದ ಕೆಎ: 25, ಎಬಿ 3338 ಸಂಖ್ಯೆಯ ಕಾರೊಂದು ವೇಗವಾಗಿ ರಾಂಗ್ ಸೈಡ್ ನಿಂದ ಬಂದ ಪರಿಣಾಮವಾಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ: 65, 1999 ಸಂಖ್ಯೆಯ ಬೊಲೆರೊ ಕ್ಯಾಂಪರ್ ವಾಹನಕ್ಕೆ ಡಿಕ್ಕಿಯಾಗಿದೆ. ಅಪಘಾತದಿಂದಾಗಿ ಬೊಲೆರೊ ಕ್ಯಾಂಪರ್ ವಾಹನ ರಸ್ತೆ ಪಕ್ಕದ ಗಟಾರಕ್ಕೆ ಬಿದ್ದಿದೆ.

ಕಾರಿನಲ್ಲಿದ್ದ ಬೆಂಗಳೂರು ಮೂಲದ ಸಂಪ್ರೀತ್ ಪ್ರದೀಪ್ 8, ಫೇರಿ ಸಂದೀಪ 8, ಸಂದೀಪ್ ವಾಸುದೇವ 40, ಸೋನಿಯಾ ಸಂದೀಪ್ 40, ಪ್ರದೀಪ್ ಷಣ್ಮುಖ 38 ಎಂಬುವವರಿಗೆ ಗಾಯವಾಗಿದ್ದು ಇವರಲ್ಲಿ ಮೂವರಿಗೆ ಗಂಭೀರ ಗಾಯವಾಗಿದೆ. ಬೊಲೆರೊ ಕ್ಯಾ‌ಂಪರ್ ವಾಹನದ ಚಾಲಕ ಜೋಯಿಡಾ ತಾಲೂಕಿನ‌ ಪಣಸೋಲಿ‌ ನಿವಾಸಿ ಈಶ್ವರ ಗಜ್ಜಪ್ಪನವರ 48, ಇವರಿಗೂ ಗಾಯವಾಗಿದೆ. ಗಾಯಗೊಂಡ ಎಲ್ಲರನ್ನು ತಕ್ಷಣ ದಾಂಡೇಲಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಬೊಲೆರೊ ಕ್ಯಾಂಪರ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಗಳಾದ ಶಿವಾನಂದ ನಾವದಗಿ‌ ಮತ್ತು ಜಗದೀಶ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ