suddibindu.in
sirsi:ಶಿರಸಿ : ಉತ್ತರಕನ್ನಡ(uttarkannada) ಜಿಲ್ಲೆಯಲ್ಲಿ ಮಂಗನಕಾಯಿಲೆ(kfd Death) ಆರ್ಭಟ ಮುಂದುವರೆದಿದ್ದು, ಕಾಯಿಲೆಯಿಂದಾಗಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಶಿರಸಿಯ ಹತ್ತರಗಿ ನವಿಲಗಾರದಲ್ಲಿ ಮಂಗನಕಾಯಿಲೆಗೆ ಇಂದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದರಿಂದಾಗಿ ಸಾವಿನ ಸಂಖ್ಯೆ ಮೂರಕ್ಕೇರಿದೆ.
ಮೃತ ವ್ಯಕ್ತಿ ಮಂಗನಕಾಯಿಲೆಗೆ(Monkey Fever) ಒಳಗಾಗಿ, ಕೆಲವು ದಿನಗಳಿಂದ ಉಡುಪಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಈಗಾಗಲೇ ಸಿದ್ದಾಪುರ ತಾಲೂಕಿನಲ್ಲಿ ಇಬ್ಬರೂ ಮಂಗನಕಾಯಿಲೆಯಿಂದಾಗಿ ಮೃತಪಟ್ಟಿದ್ದರು. ಜಿಲ್ಲೆಯಲ್ಲಿ ಈ ವರೆಗೆ 47 ಜನರಲ್ಲಿ ಕೆ.ಎಫ್.ಡಿ. ಸೋಂಕು ಪತ್ತೆಯಾಗಿದೆ. ಸಿದ್ದಾಪುರದಲ್ಲಿ ಅತೀ ಹೆಚ್ಚು ಮಂಗನಕಾಯಿಲೆ ಪ್ರಕರಣ ಪತ್ತೆಯಾಗಿದೆ. ಇನ್ನೂ ಶಿರಸಿಯಲ್ಲಿ ಇದೇ ಮೊದಲ ಪ್ರಕರಣ ಪತ್ತೆಯಾಗಿದ್ದು, ಮೃತಪಟ್ಟಿದ್ದಾರೆ.
ಇದನ್ನೂ ಓದಿ:-
- ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕಿ : ಮೈ ತುಂಬಾ ಬಾಸುಂಡೆ
- ನೀರಿನ ಸಮಸ್ಯೆ ಹೇಳಿಕೆಯಲ್ಲೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳು,ಜನಪ್ರತಿನಿಧಿಗಳು..!
- ಆಧಾರ್ ಕಾರ್ಡ್ಗಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ 80 ವರ್ಷದ ಅಜ್ಜಿ
ಸಾವಿನ ಸಂಖ್ಯೆಯಲ್ಲಿ ಏರಿಕೆ !
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆ 8ಜನ ಸಾವು ಕಂಡಿದ್ದರು. ಈ ವರ್ಷ ಮೂರಕ್ಕೆ ಏರಿಕೆಯಾಗಿದೆ.ಕಾಯಿಲೆಗೆ ಈ ಹಿಂದೆ ನೀಡಲಾಗುತ್ತಿದ್ದ ಲಸಿಕೆಯನ್ನು ಪರಿಣಾಮಕಾರಿ ಅಲ್ಲ ಹಾಗೂ ಗುಣಮಟ್ಟದ ಕಾರಣ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ( CDSCO) ಹಿಂಪಡೆದಿದೆ.ಹೀಗಾಗಿ ಮಂಗನಕಾಯಿಲೆ ಗೆ ಲಸಿಕೆ ಸಹ ಇಲ್ಲ.ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಸೊಳ್ಳೆ,ಉಣಗು, ತಿಗಣೆಗಳು ಕಚ್ಚದಂತೆ ತಡೆಯುವ ಡಿ.ಎಮ್.ಪಿ ಆಯಲ್ ನನ್ನು ಮಾತ್ರ ಜನರಿಗೆ ನೀಡುತ್ತಿದ್ದು ಎರಡು ವರ್ಷದಿಂದ ಲಸಿಕೆ ಬಂದ್ ಮಾಡಿದೆ. ಹೀಗಾಗಿ ಜನರಲ್ಲಿ ಸಹ ಲಸಿಕೆ ಇಲ್ಲದ ಕಾರಣ ಸೊಂಕಿನ ಪ್ರಮಾಣ ಸಹ ಗಣನೀಯ ಏರಿಕೆ ಕಂಡಿದೆ.ಇನ್ನು ಈ ಹಿಂದೆ ಸರ್ಕಾರ ಮಂಗನಕಾಯಿಲೆಯಿಂದ ಮೃತರಾದ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿತ್ತು. ಇದರಂತೆ ಶಿವಮೊಗ್ಗ ಜಿಲ್ಲೆಯ ಮೃತರ ಕುಟುಂಬಕ್ಕೆ ಪರಿಹಾರ ನೀಡಿತ್ತು.ಆದರೇ ಉತ್ತರ ಕನ್ನಡ ಜಿಲ್ಲೆಯ ಮೃತರ ಕುಟುಂಬಕ್ಕೆ ಪರಿಹಾರ ಈವರೆಗೂ ಬಿಡುಗಡೆಯಾಗಿಲ್ಲ.
ರೋಗ ಲಕ್ಷಣ ಏನು?
ಉಣುಗು ಕಡಿತದಿಂದ ವೈರಸ್ ಗಳು ದೇಹ ಸೇರಿದ ಒಂದು ವಾರದ ನಂತರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ, ಜ್ವರ, ತಲೆನೋವು, ನರದೌರ್ಬಲ್ಯ, ಮಾಂಸಖಂಡಗಳ ಸೆಳೆತ, ವಾಂತಿ ಪ್ರಾರಂಭವಾಗುತ್ತದೆ. ಆಯಾಸ ಉಂಟಾಗುವುದಲ್ಲದೆ ಬಾಯಿ, ವಸಡು ಮೂಗು ಹಾಗೂ ಕರುಳಿನಲ್ಲಿ ರಕ್ತಸ್ರಾವವಾಗುತ್ತದೆ. ಆದರೆ ಶೇ.10-20 ಜನರಲ್ಲಿ ಈ ಕಾಯಿಲೆಯು 2ನೇ ಹಂತಕ್ಕೆ ತಲುಪುವ ಸಾಧ್ಯತೆ ಇರುತ್ತದೆ.ಜ್ವರದ ಜೊತೆಗೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ, ಮೂರನೇ ವಾರದ ಪ್ರಾರಂಭದಲ್ಲಿ ತಲೆನೋವು, ಮಾನಸಿಕ ಅಸ್ವಸ್ಥತೆಯ ಲಕ್ಷಣ, ಕಣ್ಣು ಮಂಜಾಗುತ್ತದೆ.ರೋಗಿಯು ಕಡಿಮೆ ರಕ್ತದೊತ್ತಡ ಹಾಗೂ ಪ್ಲೇಟ್‌ಲೇಟ್, ಕೆಂಪು ರಕ್ತಕಣ ಸಂಖ್ಯೆ ಮತ್ತು ಬಿಳಿರಕ್ತಕಣಗಳ ಕೊರತೆಯಿಂದ ಬಳಲುತ್ತಾನೆ. ರೋಗನಿರೋಧಕ ಶಕ್ತಿಯಿರುವ ವ್ಯಕ್ತಿಯು ಒಂದೆರೆಡು ವಾರಗಳಲ್ಲಿ ಚೇತರಿಸಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ. 15- 20 ದಿನಗಳವರೆಗೆ ರೋಗಿಯ ಸ್ಥಿತಿ ಗಂಭೀರವಾಗಿರುತ್ತದೆ. ಈ ಕಾಯಿಲೆಯಿಂದ ಮರಣ ಹೊಂದುವವರ ಸಂಖ್ಯೆ 3-5%. ಆಗಿದೆ.