ಸುದ್ದಿಬಿಂದು ನ್ಯೂಸ್ ಡೆಸ್ಕ್

ತುಮಕೂರು : ಮನೆಯಲ್ಲಿ ಅಕ್ರಮ ಸಾವಿರೂ ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನ ಲೋಕಾಯುಕ್ತ ಪೊಲೀಸರು ಕ್ಯಾತಸಂದ್ರ ಟೋಲ್ ಗೇಟ್ ಬಳಿ ಬಂಧಿಸಿದ್ದಾರೆ.

ಬಂಧಿತ ಮಾಡಾಳ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಸಿಕ್ಕ‌ಬಳಿಕ ಅವರು ತಲೆ‌ ಮರೆಸಿಕೊಂಡಿದ್ದರು.ಬಳಿಕ ಇವರು ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು.

ಮಧ್ಯಂತರ ಜಾಮೀನು ಅವಧಿ ಮುಕ್ತಾಯ ಆಗುತ್ತಿದ್ದಂತೆ ಮಾಡಾಳ್ ಮತ್ತೆ ಜಾಮೀನಿಗಾಗಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು.ಕೋರ್ಟ್ ಗೆ ಸಲ್ಲಿಸಿದ ಜಾಮೀನು ಅರ್ಜಿ ಇಂದು ವಜಾಗೊಂಡಿದೆ. ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಾಡಾಳ್ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದರು‌.

ಮಾಡಾಳ್ ಅಜ್ಞಾತ ಸ್ಥಳಕ್ಕೆ ತೆರಳುತ್ತಿರುವ ಸುದ್ದಿ ತಿಳಿದ ಲೋಕಾಯುಕ್ತ ಪೊಲೀಸರು‌ ಮಾಡಾಳ್ ಅವರನ್ನ ಬೆನ್ನಟ್ಟಿ ತುಮಕೂರಿನ ಕ್ಯಾತಸಂದ್ರ ಟೋಲ್‌ ಗೇಟ್ ಬಳಿ ಬಂಧಿಸಲಾಗಿದೆ.