ಸುದ್ದಿಬಿಂದು ನ್ಯೂಸ್ ಡೆಸ್ಕ್
ಬೆಂಗಳೂರು : ವಿಧಾನಸಭಾ ಚುನಾವಣೆಗೆ ದಿನಾಂಕ ಮಾತ್ರ ಘೋಷಣೆಯಾಗಬೇಕಿದ್ದು, ಬಿಜೆಪಿ ತನ್ನ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಸದ್ಯದಲ್ಲೆ ಬಿಡುಗಡೆ ಮಾಡಲಿದ್ದು.ಕರಾವಳಿ ಜಿಲ್ಲೆಯ ಇಬ್ಬರೂ ಹಾಲಿ ಬಿಜೆಪಿ ಶಾಸಕರಿಗೆ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇದೆ ಎ‌ನ್ನಲಾಗುತ್ತಿದೆ‌.

ಉತ್ತರಕನ್ನಡ ಜಿಲ್ಲೆಯ ಕುಮಟಾ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿಗೆ ಈ ಟಿಕೇಟ್ ಕೈ ತಪ್ಪಲಿದೆಯಂತೆ.
ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುವ ಮುನ್ನ ಇದೆ ತಿಂಗಳ 30ರಂದು ಟಿಕೇಟ್ ಆಕಾಂಕ್ಷಿಗಳ ಜೊತೆ ಸಭೆ ನಡೆಸಲಿದ್ದು, ಬಳಿಕ  ಏಪ್ರಿಲ್ ಮೊದಲ ವಾರದಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಹೆಸರನ್ನ ಅಧಿಕೃತವಾಗಿ ಘೋಷಣೆ ಮಾಡಲಿದೆ.

ಪ್ರಮುಖವಾಗಿ ಉತ್ತರಕನ್ನಡ ಜಿಲ್ಲೆಯ ಕುಮಟಾ ವಿಧಾನಸಭಾ ಕ್ಷೇತ್ರ ಬಿಜೆಪಿ ಹಾಗೂ ಬೇರೆ ಖಾಸಗಿ ಸಂಸ್ಥೆಗಳು ನಡೆಸಿರುವ ಸರ್ವೆ ಪ್ರಕಾರ ಅಲ್ಲಿನ ಹಾಲಿ ಬಿಜೆಪಿ ಶಾಸಕರಾಗಿರುವ ದಿನಕರ ಶೆಟ್ಟಿ ಅವರ ವಿರುದ್ಧವಾಗಿಯೇ ಸರ್ವೆಯ ಫಲಿತಾಂಶ ಹೊರ ಬಿದ್ದಿದೆ.ಇನ್ನೂ ದಕ್ಷಿಣ ಕನ್ನಡದ ಒಂದು ಕ್ಷೇತ್ರದಲ್ಲಿಯೂ ಇದೆ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದ್ದು, ಹೀಗಾಗಿ ಈ ಎರಡು ಕ್ಷೇತ್ರದ ಹಾಲಿ ಬಿಜೆಪಿಯ ಶಾಸಕರಿಗೆ ಈ ಬಾರಿ ಬಿಜೆಪಿ ಟಿಕೇಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನುವ ಮಾತು ದಟ್ಟವಾಗಿ ಕೇಳಿ ಬರುತ್ತಿದೆ.

ಇನ್ನೂ ಉತ್ತರಕನ್ನಡ ಜಿಲ್ಲೆಯ ಕಾರವಾರ,ಭಟ್ಕಳ,ಶಿರಸಿ ಹಾಗೂ ಯಲ್ಲಾಪುರ ಈ ನಾಲ್ಕು ಕ್ಷೇತ್ರದ ಟಿಕೇಟ್ ನಲ್ಲಿ ಯಾವುದೆ ಗೊಂದಲ ಇಲ್ಲ ಎನ್ನಲಾಗಿದ್ದು, ಹಾಲಿ ಶಾಸಕರಿಗೆ ಎರಡನೇ ಬಾರಿ ಟಿಕೇಟ್ ಸಿಗಲಿದೆ ಅಂತೆ.

ಬೆಂಗಳೂರಿನತ್ತ ದೌಡಾಯಿಸಿದ ಆಕಾಂಕ್ಷಿಗಳು

ಈ ಎರಡು ಕ್ಷೇತ್ರದಲ್ಲಿಯೂ ಹಾಲಿ ಶಾಸಕರಿಗೆ ಟಿಕೇಟ್ ತಪ್ಪುವ ಸಾಧ್ಯತೆ ಇದೆ ಎನ್ನುವ ಒಳ ಸುಳಿವು ಸಿಕ್ಕ ಕೆಲ ಆಕಾಂಕ್ಷಿಗಳು ಈಗಾಗಲೇ ಬೆಂಗಳೂರಿಗೆ ತಲುಪಿದ್ದು, ಹಾಲಿ ಶಾಸಕರನ್ನ ಕೈ ಬಿಟ್ಟು ಬೇರೆಯವರಿಗೆ ಟಿಕೇಟ್ ನೀಡುವುದಾದಲ್ಲಿ ತಮ್ಮಗೆ ಟಿಕೇಟ್ ನೀಡಿ ಎಂದು ತಮ್ಮದೆ ಮುಖಂಡರ ಮೂಲಕ ಹೈಕಮಾಂಡ ಮೇಲೆ ಒತ್ತಡ ತರುವ ತಂತ್ರವನ್ನ ನಡೆಸುತ್ತಿದ್ದಾರೆ‌‌ ಎನ್ನಲಾಗಿದ್ದು, ಬಹುತೇಕ ಆಕಾಂಕ್ಷಿಗಳು ತಮ್ಮದೆ ಆದ ರೀತಿಯಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.