ಸುದ್ದಿಬಿಂದು ನ್ಯೂಸ್ ಡೆಸ್ಕ್
ಹುಬ್ಬಳ್ಳಿ : ದಾಖಲೆ ಇಲ್ಲದೆ ಅಂಕೋಲಾದಿಂದ ಹುಬ್ಬಳ್ಳಿ ಕಡೆ ಕಾರನಲ್ಲಿ ಲಕ್ಷಾಂತರ ರೂಪಾಯಿ ಹಣ ಸಾಗಾಟ ಮಾಡುವ ವೇಳೆ ನಗರದ ಕಾರವಾರ ರಸ್ತೆಯಲ್ಲಿನ ಚೆಕ್ ಪೊಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಹಣ ಹಾಗೂ ಕಾರ ಚಾಲಕನಿಗೆ ವಶಕ್ಕೆ ಪಡೆಯಲಾಗಿದೆ.
ಅಂಕೋಲಾ ಕಡೆಯಿಂದ ಕಾರನಲ್ಲಿ ದಾಖಲೆ ಇಲ್ಲದೆ 15ಲಕ್ಷ ಹಣವನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈ ವೇಳೆ ಹುಬ್ಬಳ್ಳಿ ನಗರದ ಚೆಕ್ ಪೊಸ್ಟ್ ಬಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಅಕ್ರಮ ಹಣ ಪತ್ತೆಯಾಗಿದೆ.
ಈಗಾಗಲೆ ಪ್ರಕರಣಕ್ಕೆ ಸಂಬಂಧಿಸಿ ಕಾರ ಚಾಲಕನಿಗೆ ಹಳೆ ಹುಬ್ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.