ಸುದ್ದಿಬಿಂದು ಬ್ಯೂರೋ
ಕುಮಟಾ: ಸಿದ್ದರಾಮಯ್ಯನವರ ದುರಂಕಾರದ ವರ್ತನೆ ಸಲುವಾಗಿ ಬೇಕೆಂಯಲೇ ನಾನು ಅವತಿಗೆ ಏಕವಚನದಲ್ಲಿ ಮಾತನಾಡಿದ್ದೆ ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:-ಸೂರಜ್ ನಾಯ್ಕ ಸೋನಿಗೆ ಶುಕ್ರದೆಸೆ
ಅವರು ಇಂದು ಕುಮಟಾದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿ ಮಾತನಾಡಿದ ಸಂಸದ ಅನಂತಕುಮಾರ ಹೆಗಡೆ ಅವರು. ಸಿದ್ದರಾಮಯ್ಯ ಸರ್ಕಾರ ಹಿಂದೂಗಳ ವಿರೋಧಿ ಮಾಡುವುದು ಒಳ್ಳೆಯದಲ್ಲ, ಸಿದ್ದರಾಮಯ್ಯನವರಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ತಕ್ಕ ಪಾಠ ಕಲಿಯಲಿದೆ.ರಾಷ್ಟ್ರಪತಿಯವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದು ಇದು ಸಿದ್ದರಾಮಯ್ಯನವರ ಸಭ್ಯತೆಯೇ ಎಂದು ಪ್ರಶ್ನಿಸಿದರು.
ನಾನು ಸಿದ್ದರಾಮಯ್ಯನವರ ಬಗ್ಗೆ ಮಾತಮಾಡಿದಾಗ ಕಾಂಗ್ರೆಸ್ ನವರು ರಾಜ್ಯಾದ್ಯಂತ ಹೋರಾಟ ಮಾಡಿದ್ದರು, ಈಗ ಏನು ಕಾಂಗ್ರೆಸ್ ನವರು ಮಲಗಿಕೊಂಡಿದ್ದಾರಾ. ಕಾಂಗ್ರೆಸ್ ರಾಜ್ಯದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ರಾಜಕೀಯ ಹೇಳಿಕೆಗಳು ಕೊಡುವುದು ಇರುತ್ತದ್ದೆ. ಆದರೆ ಅದನ್ನೆ ದ್ವೇಷ ರಾಜಕಾರಣದಿಂದ ನನ್ನ ಮೇಲೆ ದೂರು ದಾಖಲು ಮಾಡಲಾಗಿದೆ ಅಂತಾ ಅನಂತಕುಮಾರ ಹೇಳಿದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸತ್ತು ಹೋಗಿದ್ದು, ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ. ಲೋಕಸಭಾ ಚುನಾವಣೆ ಪೂರ್ವದಲ್ಲಿ ಆರ್ಥಿಕ ಪರಿಸ್ಥಿತಿಯ ಶ್ವೇತ ಪತ್ರ ಹೊರಡಿಸಬೇಕೆಂದು ಒತ್ತಾಯಿಸಿದರು.