ಸುದ್ದಿಬಿಂದು ಬ್ಯೂರೊ
ಯಲ್ಲಾಪುರ
: ಬಸ್ ನಿಲ್ದಾಣದಲ್ಲಿ ಸೀರೆ ಉಟ್ಟುಕೊಂಡು ತೃತೀಯ ಲಿಂಗಿಯಂತೆ ವ್ಯವಹರಿಸುತ್ತಿದ್ದ ವ್ಯಕ್ತಿಯನ್ನು ಇಬ್ಬರು ತೃತೀಯ ಲಿಂಗಿಯರು, ಸೀರೆ ಬಿಚ್ಚಿ, ಚಡ್ಡಿ ಹರಿದು ತೃತೀಯ ಲಿಂಗ ಅಲ್ಲದೆ ಪುರುಷನಾಗಿದ್ದಾನೆ ಎಂದು ಸಾಬೀತುಪಡಿಸಿರುವ ಘಟನೆ‌ ಉತ್ತರಕನ್ನಡ(Uttarkannada) ಜಿಲ್ಲೆಯ ಯಲ್ಲಾಪುರ ಪಟ್ಟಣದಲ್ಲಿ ನಡೆದಿದೆ.

ಇತ್ತೀಚೆಗೆ ರೈಲು ಹಾಗೂ ಸಾರ್ವಜನಿಕ ಪ್ರದೇಶದಲ್ಲಿ (public place)ತೃತೀಯ ಲಿಂಗಿಗಳಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ದೂರು ಬರುತ್ತಿದ್ದವು. ಈ ಕುರಿತಂತೆ ಹಲವು ವಿಡಿಯೋಗಳು ಕೂಡ ಹರಿದಾಡುತ್ತಿದ್ದಿದಿದೆ. ತೃತೀಯ ಲಿಂಗಿಗಳ ಕುರಿತು ಜನರಲ್ಲಿ ಕೆಟ್ಟ ಭಾವನೆ ಮೂಡಲು ಕಾರಣವಾಗಿತ್ತು. ಯಲ್ಲಾಪುರದಲ್ಲಿ ಸೀರೆ ಉಟ್ಟು ತೃತೀಯ ಲಿಂಗಿಯಂತೆ ವರ್ತಿಸುತ್ತಿದ್ದ
ಈತ ಸದಾ ಬೇಡುವುದು, ಜನರಿಗೆ ತೊಂದರೆ ಹಣ ನೀಡುವುದು, ಹಣ ನೀಡಿದಿದ್ದರೆ ಕೈಯಲ್ಲಿರುವ ವಸ್ತುಗಳನ್ನು ತೆಗೆದು ನೆಲಕ್ಕೆ ಎಸೆಯುವುದನ್ನ ಮಾಡುತ್ತಿದ್ದ.ಈತನ ಉಪಟಳ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು.

ಈತ ಹೆಚ್ಚಾಗಿ ಬಸ್ ನಿಲ್ದಾಣ, ಮಾರುಕಟ್ಟೆ ಕಡೆ ಹೆಚ್ಚು ಕಾಣಿಸಿಕೊಂಡು ಸಾರ್ವಜನಿಕರಿಗೆ ಸಮಸ್ಯೆಯನ್ನು ಉಂಟು ಮಾಡಿದ್ದ. ವಾರದ ಹಿಂದೆ ಹುಬ್ಬಳ್ಳಿಯಿಂದ ಆಗಮಿಸಿದ್ದ ತೃತೀಯ ಲಿಂಗಿಗಳ ತಂಡವೊಂದು ಸಾರ್ವಜನಿಕ ಸ್ಥಳದಲ್ಲಿಯೇ ಈತನಿಗೆ ಗೂಸಾ ನೀಡಿದ್ದರು. ಆದರೂ ಈತ ಹಳೆ ಚಾಳಿಯನ್ನೆ ಮುಂದುವರೆಸಿದ್ದ,

ಹುಬ್ಬಳ್ಳಿ ( Hubli,) ಕಡೆಯಿಂದ ಆಗಮಿಸಿದ್ದ ಇಬ್ಬರು ತೃತೀಯ ಲಿಂಗಿಗಳು ಮನಸ್ವಚ್ಚೆ ಥಳಿಸಿದ್ದಲ್ಲದೆ, ಆತನ ತೊಟ್ಟಿಕೊಂಡಿದ್ದ ಸೀರೆಯನ್ನು ತೆಗೆಸಿ, ಸ್ಥಳದಲ್ಲಿಯೇ ಹರಿದು, ಸಾರ್ವಜನಿಕರ ಎದುರು ಆತನ ಚೆಡ್ಡಿ ಸಹ ಹರಿದು ಹಾಕಿ ಆತ ತೃತೀಯ ಲಿಂಗ ಅಲ್ಲದೆ ಪುರುಷನಾಗಿದ್ದಾನೆ ಎಂದು ಸಾಬೀತುಪಡಿಸಿದ್ದಾರೆ. ಇದೀಗ ಆಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಹಲವು ಚರ್ಚೆಗ ಕಾರಣವಾಗಿದೆ.