ಸುದ್ದಿಬಿಂದು ಬ್ಯೂರೋ
ಭಟ್ಕಳ
: ಕೋಲಾರದಿಂದ ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ 22ಪ್ರವಾಸಿಗರು ಸಮುದ್ರದಲ್ಲಿ ಈಜಲು ಹೋಗಿದ್ದು ಅವರಲ್ಲಿ ಇಬ್ಬರೂ ಸಮುದ್ರದ‌ ಅಲೆಗೆ ಸಿಲುಕಿ ಕೊಚ್ಚಕೊಂಡು ಹೋಗಿದ್ದು, ಓರ್ವನ ರಕ್ಷಣೆ ಮಾಡಲಾಗಿದ್ದು, ಇನ್ನೋರ್ವ ನಾಪತ್ತೆ ಯಾಗಿದ್ದಾನೆ.

ಸಾಲು ಸಾಲು ರಜೆ ಇರುವ ಹಿನ್ನಲೆಯಲ್ಲಿ ಕೋಲಾರದಿಂದ 22ಪ್ರವಾಸಿಗರು ಒಟ್ಟಿಗೆ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು.‌ಸಮುದ್ರಕ್ಕಿಳಿಯದಂತೆ ನಿರ್ಬಂಧ‌ ಇದ್ದರು ಸಹ ಇಲ್ಲಿಗೆ ಬಂದ ಪ್ರವಾಸಿಗರು ಮೋಜು‌ಮಸ್ತಿಗಾಗಿ ಸಮುದ್ರಕ್ಕೆ ಇಳಿದಿದ್ದಾರೆ.‌ ಇವರಲ್ಲಿ ಕೋಲಾರ ಮೂಲದ ಮಣಿತೇಜ್ (21) ಹಾಗೂ ಯಶ್ (22) ಎಂಬುವವರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರು.

ಇಬ್ಬರ ಪೈಕಿ ಇಪ್ಪತ್ತೆರಡು ವರ್ಷದ ಯಶ್ ಎಂಬಾತನ ರಕ್ಷಣೆ‌ ಮಾಡಲಾಗಿದೆ.
ಇನ್ನೂ ಮಣಿತೇಜಾ ಸಮುದ್ರದಲ್ಲಿ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ಕಾರ್ಯ‌ನಡೆಸಲಾಗುತ್ತಿದ್ದೆ. ಘಟನೆ ಕುರಿತಾಗಿ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.