ಸುದ್ದಿಬಿಂದು ಬ್ಯೂರೋ
ಕುಮಟ :ತ್ರಿವರ್ಣ ಧ್ವಜದ ಅಶೋಕಚಕ್ರ ತೆಗೆದು ಅರ್ಧಚಂದ್ರದೊಂದಿಗೆ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಿರುವ ಪ್ರಕಕರಣಕ್ಕೆ ಸಂಬಂಧಿಸಿ ಉತ್ತರಕನ್ನಡ(Uttarkannada) ಜಿಲ್ಲೆಯ ಕುಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
.

ರಾಷ್ಟಧ್ವಜಕ್ಕೆ (National Flag,) ಅಪಮಾನ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕುಮಟಾದ ಮಿರ್ಜಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈದ್ ಮಿಲಾದ್ (Eid Milad)ಸಂದರ್ಭದಲ್ಲಿ ಮೆರವಣಿಗೆ ನಡೆಸಿದ್ದ ಅನ್ಯಕೋಮಿನವರು ರಾಷ್ಟ್ರಧ್ವಜದಲ್ಲಿ ಅಶೋಕಚಕ್ರದ ಬದಲು ಅರ್ಧಚಂದ್ರ ಹಾಕಿ ಅಪಮಾನ ಮಾಡಿದ್ದಾರೆ. ಇತ್ತೀಚೆಗೆ ಶಿರಸಿ ಹಾಗೂ ಯಲ್ಲಾಪುರದಲ್ಲಿ ಸಹ ಇಂತಹದ್ದೇ ಪ್ರಕಣವಾಗಿದೆ.

ಕುಮಟ ತಾಲೂಕಿನ ಮಿರ್ಜಾನ್‌ನ ಜಮಾತ್ ಉಲ್ ಮುಸ್ಲಮಿನ್ ಕಮಿಟಿ ನಡೆಸಿದ್ದ ಮೆರವಣಿಗೆ ವೇಳೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವೀಡಿಯೋ ಆಧರಿಸಿ ಕುಮಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ‌