ಸುದ್ದಿಬಿಂದು ಬ್ಯೂರೋ
ಕುಮಟ : ತಾಲೂಕಿನ ಬರ್ಗಿಯಲ್ಲಿ ಕೆಎಸ್ಆರ್‌ಟಿಸಿ ಬಸ್ (ksrtc bus) ಗಳಿಗೆ ನಿಲುಗಡೆಗೆ ಅಕಾಶ ಇದ್ದರು ಕೂಡ ಪದೆ ಪದೆ ಚಾಲಕರು ಬಸ್ ನಿಲ್ಲಿಸದೆ ಹೋಗುವ ಘಟನೆಗಳು ನಡೆಯುತ್ತಲೆ ಇದೆ. ಇದರಿಂದಾಗಿ ದೂರ ದೂರ ಹೋಗು ಪ್ರಯಾಣಿಕರು ಪರದಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ತಾಲೂಕಾ ಕೇಂದ್ರದಿಂದ ಕೇವಲ 14ಕಿಲೋಟರ್ ದೂರದಲ್ಲಿ ಬರ್ಗಿ ಗ್ರಾಮವಿದ್ದು, ಗ್ರಾಮದ ಹೃದಯ ಭಾಗದಲ್ಲೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಆದರೆ ಅದ್ಯಾಕೋ ಏನು ನಿಲುಗಡೆಗೆ ಅವಕಾಶಗಳಿದ್ದರು ಚಾಲಕರು ಮಾತ್ರ ಬಸ್ ಹತ್ತಲು ಪ್ರಯಾಣಿಕರಿದ್ದು ಕೈ ಮಾಡಿದ್ದರು ನಿಲ್ಲಿಸದೆ ಹೋಗುತ್ತಿದ್ದಾರೆ.

ಈ ಬಗ್ಗೆ ಇವರ ಕಾಟ ತಡೆಯದೆ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನ ಕೇಳಿದ್ದರೆ ನಿಮ್ಮೂರಲ್ಲಿ ಎಲ್ಲಾ ಜಿಲ್ಲೆಯ ಎಲ್ಲಾ ಡಿಪೋ‌ ಬಸ್ ಗಳಿಗೂ ನಿಲುಗಡೆಗೆ ಇದೆ. ಆದರೆ ಚಾಲಕರು ಯಾಕೆ ನಿಲ್ಲಿಸುತ್ತಿಲ್ಲ. ಎಂದು ಜಾರಿ ಕೊಳ್ಳುತ್ತಲ್ಲೆ ಬಂದಿದ್ದಾರೆ. ಯಾವೇಲ್ಲಾ ಬಸ್ ಗಳಿಗೆ ಬರ್ಗಿಯಲ್ಲಿ ನಿಲುಗಡ ಇದೆ ಎನ್ನುವ ಬಗ್ಗೆ ಲಿಖಿತವಾಗಿ ಮಾಹಿತಿ‌ ನೀಡಿ ಅಂತಾ ಅನೇಕ ಬಾರಿ ಗ್ರಾಮಸ್ಥರು ಗ್ರಾಮ‌ ಪಂಚಾಯತದ ಸಭೆಗಳಲ್ಲಿ ಅಧಿಕಾರಿಗಳ ಬಳಿ ಕೇಳಕೊಂಡಿದ್ದಾರೆ. ಆದರೆ ಆ ಮಾಹಿತಿ ಸಹ ಇನ್ನೂ ಸಿಕ್ಕಿಲ್ಲ.

ಬಸ್ ನಿಲ್ಲಿಸದೆ ಇದರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೆ ಯಾವ ಬಸ್ ನಿಲ್ಲಿಸಿಲ್ಲ ಆ ಚಾಲಕರಿಗೆ ಕೇಳಿದ್ದೇವೆ ಬಸ್ ಪುಲ್ ಆಗಿತ್ತು. 90ಜನ ಪ್ರಯಾಣಿಕರಿದ್ದರು ಹಾಗಾಗಿ ಬರ್ಗಿಯಲ್ಲಿ ಪ್ರಯಾಣಿಕರನ್ನ ಹತ್ತಿಸಿಕೊಳ್ಳಲು ಆಗಿಲ್ಲ ಎಂದು ಹೇಳತ್ತಿದ್ದಾರೆ ಅಂತಾ ಹಿರಿಯ ಅಧಿಕಾರಿಗಳು ಪ್ರಯಾಣಿಕರಿಗೆ ಉತ್ತರಿಸ್ತಾರೆ. ಬಸ್ ನಿಲ್ದಾಣದಿಂದ 14ಕಿಲೋಮೀಟರ್ ಬರುವಷ್ಟರಲ್ಲೆ ಆ ಬಸ್ ಪುಲ್ ಆಗಿದ್ದರೆ. ಮುಂದೆ ಕಾರವಾರಕ್ಕೆ 60 ಕಿಲೋಮೀಟರ್ ಅಥವಾ ಕಾರವಾರದಿಂದ ಕುಮಟ ಕಡೆ ಹೋಗುವ ಪ್ರಯಾಣಿಕರ ಕಥೆ ಏನು ಎನ್ನುವ ಪ್ರಶ್ನೆ ಎದುರಾಗಿದೆ‌.

ನಲವತ್ತು ಐವತ್ತು ಪ್ರಯಾಣಿಕರನ್ನ ಹತ್ತಿಸಿಕೊಂಡು ಹೋಗುವ ಬಸ್ ನಲ್ಲಿ ನೂರರಷ್ಟು‌ ಪ್ರಯಾಣಿಕರನ್ನ ಹತ್ತಿಸಿಕೊಂಡು ಹೋಗುವುದು ಅಪರಾಧ ಅಲ್ಲವೇ..? ಒಂದು ವೇಳೆ ಆ ಬಸ್ ಗಳು ಕುಮಟಾದಲ್ಲೆ ಪುಲ್ ಆಗಿದೆ ಅಂದಾದರೆ ಅದೆ ಸಮಯಕ್ಕೆ ಬೇರೆ ಬಸ್ ಕಲ್ಪಿಸ ಬೇಕು ಎನ್ನುವ ಪರಿಜ್ಞಾನ ಈ ಅಧಿಕಾರಿಗಳಿಗೆ ಯಾಕೆ ಇಲ್ಲ‌ ಎಂದು ಪ್ರಯಾಣಿಕರು ಪ್ರಶ್ನೆ ಮಾಡುವಂತಾಗಿದೆ.

ಸಮಯಕ್ಕೆ ಬರುವ ಬಸ್ ನಿಲ್ಲಿಸದೆ ಹೋದರೆ ಆ ಸಮಯಕ್ಕೆ ಹೋಗಬೇಕಾದ ಪ್ರಯಾಣಿಕರು ಎಲ್ಲಿಗೆ ಹೋಗಬೇಕು..? ಇವೆಲ್ಲದರ ಬಗ್ಗೆ ಅಧಿಕಾರಿಗಳನ್ನ ಕೇಳಿದ್ದರೆ ನಾಳೆಯಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ ಎನ್ನುತ್ತಾರಂತೆ. ಇದು ಕೇವಲ ಬರ್ಗಿ ಊರಿನ ಪ್ರಯಾಣಿಕರ ಸಮಸ್ಯೆಯಲ್ಲ.

ಡಿಪೋದಲ್ಲಿ ಬಸ್ ಕೊರತೆ ಇದ್ದರೆ ಸರಕಾರದ ಗಮನಕ್ಕೆ ತರುವ ಕೆಲಸವನ್ನ ಅಧಿಕಾರಿಗಳು ಮಾಡಿಲ್ವಾ ಅಥವಾ ಸರಕಾರದ ಗಮಕ್ಕೆ ತಂದರು ಬಸ್ ಕಲ್ಪಿಸುವಲ್ಲಿ ಸರಕಾರವೆ ಹಿಂದೇಟು ಹಾಕತ್ತಾ ಬರತ್ತಾ ಇದೇಯಾ ಯಾವುದು ಕೂಡ ಸಾಮಾನ್ಯ ಜನರಿಗೆ ಅರ್ಥವಾಗುತ್ತಿಲ್ಲ. ಸರಕಾರ‌ ಇನ್ನಾದ್ದರೂ ಈ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಕಲ್ಪಿಸಬೇಕಿದೆ.