ಸುದ್ದಿಬಿಂದು ಬ್ಯೂರೋ
ನವಲಗುಂದ : (National Highway) ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಸೊಲ್ಲಾಪುರ ರಸ್ತೆಯ ಯಮನೂರ ಬೆಣ್ಣೆ ಹಳ್ಳದ ಸಮೀಪದ ಟಾಟಾ ಮೋಟರ್ಸ್(Tata Motors) ವರ್ಕ್ ಶಾಪ್ ಬಳಿ ಬಸ್ ಬಾಗಿಲಲ್ಲಿ ನಿಂತ ಪ್ರಯಾಣಿಕ ಪುಟ್ಟಿದು ಹೊರಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಪಟ್ಟಣದ ಕಲಾಲ್ ಓಣಿಯ ನಿವಾಸಿ ಯಲ್ಲಪ್ಪ ಕೃಷ್ಣಜೀ ಕಲಾಲ(46) ಮೃತಪಟ್ಟ ದುರ್ದೈವಿ. ಈತನು ತಾಲೂಕಿನ ಯಮನೂರು ಗ್ರಾಮಕ್ಕೆ ಚಾಂಗದೇವರ ದರ್ಶನ ಪಡೆದು ಮರಳಿ ನವಲಗುಂದಕ್ಕೆ ಬರುವ ವೇಳೆ ಬಿಜಾಪುರ ಬಸ್ಸಿಗೆ ಹತ್ತಿದ್ದಾರೆ ಬಸ್ ಚಾಲಕ ನಿಷ್ಕಾಳಜಿಯಿಂದ ಜೋರಾಗಿ ಓಡಿಸಿದಾಗ ಬಸ್ (Bus)ಬಾಗಿಲಲ್ಲಿ ನಿಂತ ಯಲ್ಲಪ್ಪ ಹೊರಗೆ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಸಿಪಿಐ ರವಿಕುಮಾರ ಕಪ್ಪತನವರ ಪಿಎಸ್‌ಐ(PSI) ಜನಾರ್ಧನ ಭಟ್ರಳ್ಳಿ ಹಾಗೂ ಪೊಲೀಸ್ (Police) ಸಿಬ್ಬಂದಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.