suddibindu.in
Karwar:ಕಾರವಾರ :ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದು ಕೇಂದ್ರದಲ್ಲಿ ಸರಕಾರ ಸಹ ರಚನೆಯಾಗಿದೆ.ಈ ನಡುವೆ ರಾಜ್ಯದಲ್ಲಿ ಆಪರೇಷನ್ ಕಮಲದ ಕಸರತ್ತು ನಡೆಸುತ್ತಿದೆ. ಈ ನಡುವೆ ಆಡಳಿತದಲ್ಲಿ ಇರುವ ಕಾಂಗ್ರೆಸ್‌ ಮೇಜರ್ ಸರ್ಜರಿಗೆ ಮುಂದಾಗಿದೆ‌‌..ಸಚಿವ ಸಂಪುಟದಲ್ಲಿ ಕೆಲವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ಕಾಂಗ್ರೆಸ್‌ ಹೈಕಮಾಂಡ ಚಿಂತನೆ ನಡೆಸುತ್ತಿದೆ, ಆರ್ ವಿ ದೇಶಪಾಂಡೆ,ಬಿ ಕೆ ಹರಿಪ್ರಸಾದ ಸೇರಿ ಇನ್ನೂ ಹಲವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ದತೆ ನಡೆಸಲಾಗುತ್ತಿದೆ ಎನ್ನಲಾಗಿದೆ‌.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೆಲ ಕ್ಷೇತ್ರದಲ್ಲಿ ಕಳಪೆ ಫಲಿತಾಂಶ ಬಂದ ಹಿನ್ನಲೆಯಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಗೆ ಮುಂದಾಗಿದೆಬಎನ್ನಲಾಗಿದೆ. ಜೊತೆಗೆ ಜಾತಿ ಲೆಕ್ಕಾಚಾರದ‌ ಮೇಲೆ ಸ್ಥಾನ ನೀಡುವ ಬಗ್ಗೆಯ ಸಹ ಚರ್ಚೆ ಆರಂಭವಾಗಿದೆ.ಬ್ರಾಹ್ಮಣ ಸಮಾಜಕ್ಕೆ ಸೇರಿದ ದಿನೇಶ ಗುಂಡೂರಾವ್ ಅವರನ್ನ ಕೈ ಬಿಟ್ಟು ಅವರ ಸ್ಥಾನಕ್ಕೆ ಆರ್ ವಿ ದೇಶಪಾಂಡೆ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ. ಇನ್ನೂ ಈಡಿಗ ಸಮಾಜಕ್ಕೆ ಸೇರಿರುವ ಮಧು ಬಂಗಾರಪ್ಪ ಅವರ ಬದಲಿಗೆ ಅದೆ ಸಮಾಜಕ್ಕೆ ಸೇರಿರುವ ಕೇಂದ್ರದ ಪ್ರಭಾವಿ ನಾಯಕ ಬಿ ಕೆ ಹರಿಪ್ರಸಾದ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಆದರೆ ಇವರ ಹಾಗೂ ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಗುದ್ದಾಟದಲ್ಲಿ ಹರಿಪ್ರಸಾದ ಸಚಿವ ಸ್ಥಾನ ಪಡೆದುಕೊಳ್ಳತ್ತಾರ ಎನ್ನುವ ಪ್ರಶ್ನೆ ಸಹ ಇದೆ.

ಇದನ್ನೂ ಓದಿ

ಇನ್ನೂ ಬೆಳಗಾವಿಯ ಲಕ್ಷ್ಮೀ ಹೆಬ್ಬಾಳರ್ ಅವರ ಪುತ್ರನಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರು ಗೆಲ್ಲಿಸಿಕೊಂಡು ಬರಲು ಲಕ್ಷ್ಮಿ ಹೆಬ್ಬಾಳಕರ್ ಅವರಿಂದ ಸಾಧ್ಯವಾಗದೆ ಇರುವುದರಿಂದ ಅವರನ್ನ ಸಚಿವ ಸಂಪುಟದಿಂದ ಹೊರಗಿಟ್ಟು ಅವರ ಬದಲಿಗೆ ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.ಇನ್ನೂ ಮಂಡ್ಯ ಉಸ್ತುವಾರಿಯಾಗಿರುವ ಚೆಲುವರಾಯ ಸ್ವಾಮಿ ಅವರನ್ನ ಕೈ ಬಿಟ್ಟು ಒಕ್ಕಲಿಗ ಸಮಾಜದ ಲೇಔಟ್ ಕೃಷ್ಣಪ್ಪ ಅವರ ಹೆಸರು ಕೇಳಿ ಬರುತ್ತಿದೆ..ಇನ್ನೂ ಲಿಂಗಾಯತ ಸಮಾಜದ ಶರಣಪ್ರಕಾಶ ಅವರಿಗೆ ಸಚಿವ ಸ್ಥಾನ ಒಲಿಯುವ ಸಾಧ್ಯತೆ ನಿಚ್ಚಳವಾಗಿದೆ.

ಇನ್ನೂ ಲೋಸಭಾ ಚುನಾವಣಾ ಪೂರ್ವದಲ್ಲಿ ಲಕ್ಷ್ನಣ ಸವದಿ ಅವರಿಗೆ ಕೊಟ್ಟ ಮಾತಿನಂತೆ ಚುನಾವಣಾ ನಂತರದಲ್ಲಿ ಸಚಿವ ಸ್ಥಾನ ನೀಡುವುದಾಗಿ ಪಕ್ಣದ ಹೈಕಮಾಂಡ ಹೇಳಿತ್ತು ಅದೆ ರೀತಿ ಇದೀಗ ಸಚಿವ ಸಂಪುಟದಲ್ಲಿ ಲಕ್ಣ್ಮಣ ಸವದಿ ಅವರಿಗೆ ಈ ಭಾರಿ ಸಚಿವ ಸ್ಥಾನ ನೀಡುವುದು ಬಹುತೇಕ ಫಿಕ್ಸ್ ಎನ್ನಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಬಗ್ಗೆ ಹೇಳುವುದಾದರೆ ಇಲ್ಲಿ‌ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗದೆ ಇರುವುದರಿಂದ ಸಚಿವರಾಗಿರುವ ಮಂಕಾಳು ವೈದ್ಯ ಅವರನ್ನ ಕೈ ಬಿಡಲಾಗುತ್ತದೆ ಎನ್ನುವ ಬಗ್ಗೆ ಚರ್ಚೆಗಳು ಲೋಕಸಭಾ ಚುನಾವಣೆಯ ನಂತರದಲ್ಲ ಚರ್ಚೆಯಾಗಿತ್ತು.ಆದರೆ ಮೀನುಗಾರಿಕಾ ಸಮಾಜದಿಂದ ಬೇರೆ ಯಾರೂ ಇಲ್ಲದೆ ಇರುವ ಕಾರಣ ಹಾಗೂ ಒಂದೊಮ್ಮೆ ಅವರನ್ನ ಸಚಿವ ಸ್ಥಾನದಿಂದ ಕೈ ಬಿಟ್ಟರೆ ಕರಾವಳಿ ಮೀನುಗಾರರ ಕೆಂಗಣ್ಣಿಗೆ ಕಾಂಗ್ರೆಸ್ ಗುರಿಯಾಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ಯಾವುದೇ ಕಾರಣಕ್ಕೂ ಮಂಕಾಳು ವೈದ್ಯ ಅವರನ್ನ‌ ಸಚಿವ ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.