ಸುದ್ದಿಬಿಂದು ಬ್ಯೂರೋ
ಅಂಕೋಲಾ : ಕಡಲತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವದ ಮೃತ ದೇಹವನ್ನ ಸಾಗಿಸಲು ಸ್ವತಃ ಪಿಎಸ್ ಐ ಅವರೆ ಹೆಗಲುಕೊಟ್ಟು ಶವವನ್ಕ ಸಾಗಿಸಿದ್ದು, ಪಿಎಸ್ಐ ಅವರ ಕಾರ್ಯರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಬೈಲ್ ಕಡಲತೀರದಲ್ಲಿ ಸುಮಾರು 35ರಿಂದ 40 ವರ್ಷದ ಅಪರಿಚಿತ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಪರಿಚಿತ ಶವ ಪತ್ತೆಯಾಗಿರುವ ಸುದ್ದಿ ತಿಳಿದ ಅಂಕೋಲಾ PSI ಉದ್ದಪ್ಪ ಅಶೋಕ ಡಿ ಅವರು ತಮ್ಮ ಸಿಬ್ಬಂದಿಗಳ ಜೊತೆಗೆ ಶವ ಪತ್ತೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಸುಮಾರು 20 ದಿನಗಳ ಹಿಂದೆ ಮೃತ ಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದ್ದು, ಮೃತ ದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಶವ ಪತ್ತೆಯಾಗಿರುವ ಸ್ಥಳ ದುರ್ಗಮ ಪ್ರದೇಶವಾಗಿದ್ದು, ಶವ ಪತ್ತೆಯಾಗಿದ್ದ ಸ್ಥಳಕ್ಕೆ ಯಾವುದೇ ವಾಹನ ಹೋಗದ ಪರಿಸ್ಥಿತಿ ಇತ್ತು. ಹೀಗಾಗಿ ಘಟನಾ ಸ್ಥಳದಿಂದ ಹೆಗಲಮೇಲೆ ಹೊತ್ತುಕೊಂಡೆ ಶವ ಸಾಗಿಸಬೇಕಾದ ಪರಿಸ್ಥಿತಿ ಎದುರಾಗಿತ್ರು.
ಕಾರಣ ಪರಿಶೀಲನೆ ಬಳಿಕ ಶವವನ್ನ ವಾಹನದ ಇರುವ ಸ್ಥಳದವರಗೆ ಹೊತ್ತುಕೊಂಡೆ ಹೋಗಬೇಕಾಗಿದ್ದು, ಶವವನ್ನ ಸಾಗಿಸುವಾಗ ಪಿಎಸ್ಐ ಉದ್ದಪ್ಪನವರ ತಾನೊಬ್ಬ ಪೊಲೀಸ್ ಅಧಿಕಾರಿ ಅನ್ನುವುದನ್ನ ಬದಿಗಿಟ್ಟು ಸಾಮಾನ್ಯರಂತೆ ಶವ ಸಾಗಿಸಲು ಹೆಗಲುಕೊಟ್ಟಿದ್ದಾರೆ. ಪಿಎಸ್ ಐ ಅವರು ಹೆಗಲು ಕೊಟ್ಶು ಶವ ಸಾಗಿಸುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.