ಸುದ್ದಿಬಿಂದು ಬ್ಯೂರೋ
ಅಂಕೋಲಾ
:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣವಾಗಿದ್ದ ಸೇತುವೆಯ ಬೇರಿಂಗ್ ಏಕಾಏಕಿಯಾಗಿ ತುಂಡಾಗಿ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹಟ್ಟಿಕೇರಿ ಸಮೀಪ ನಡೆದಿದೆ.

ಅಂಕೋಲಾದಿಂದ ಕಾರವಾರಕ್ಕೆ ಸಂಚರಿಸುವ ರಾಷ್ಟೀಯ ಹೆದ್ದಾರಿ 66ರಲ್ಲಿ ಹಟ್ಟಿಕೇರಿಯಲ್ಲಿ ನದಿಗೆ ಸೇತುವೆ ನಿರ್ಮಾಣ ಮಾಡಲಾಗಿತ್ತು.ಈ ಸೇತುವೆಯ ಮೇಲೆ ಇಂದು ವಾಹನ ಸಂಚರಿಸುತ್ತಿರುವಾಗಲೆ ಏಕಾಏಕಿಯಾಗಿ ಸೇತುವೆಯ ಬೇರಿಂಗ್ ಕಟ್ಟ ಆಗಿದ್ದು, ಇದರಿಂದಾಗಿ ಆ ಕ್ಷಣದಲ್ಲಿ ಸೇತುವೆಯ ಮೇಲೆ ಸಂಚರಿಸುತ್ತಿದ್ದ ವಾಹನದಲ್ಲಿ ಇದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಈ ಸೇತುವೆ ಸುಮಾರು 40 ವರ್ಷದ ಹಿಂದೆ ಹಟ್ಟಿಕೇರಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದು ಎನ್ನಲಾಗಿದೆ. ಸೇತುವೆ ಬೇರಿಂಗದ ತುಂಡಾದ ತಕ್ಷಣದಿಂದ ಪಕ್ಕದ ಇನ್ನೊಂದು ಹೊಸ ಸೇತುವೆಯ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.