ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮೀನುಗಾರರಲ್ಲಿ ನಾಯಕತ್ವದ ಕೊರತೆ ಇದ್ದು, ಹೀಗಾಗಿ ಅತೀ ಹೆಚ್ಚು ಮತಗಳ ಅಂತರಿಂದ ಆಯ್ಕೆಗೊಂಡಿರುವ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರಿಗೆ ಮೀನುಗಾರಿಕೆ ಮತ್ತು ಬಂದರು ಸಚಿವರನ್ನಾಗಿ ನೀಡಬೇಕು ಎಂದು ಜಿಲ್ಲೆಯ ಮೀನುಗಾರರ ಸಮುದಾಯ ಮತ್ತು ಸಂಘಟನೆಗಳು ಒತ್ತಾಯಿಸಿವೆ.

ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆಯಲಾಗಿದ್್ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಮೀನುಗಾರ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಯಲ್ಲಿ ಮಂತ್ರಿ ಸ್ಥಾನ ಜಿಲ್ಲೆಯ ಯಾರಿಗೂ ಕೊಟ್ಟರೂ ಆಕ್ಷೇಪವಿಲ್ಲ.ಮಂಕಾಳ ವೈದ್ಯರನ್ನ ಬಂದರು ಮತ್ತು ಮೀನುಗಾರಿಕಾ ಸಚಿವರನ್ನಾಗಿ ಮಾಡಬೇಕು‌. ಅವರಿಗೆ ಮೀನುಗಾರಿಕೆ ಬಗ್ಗೆ ಅನುಭವ ಇದೆ. ದಕ್ಷಿಣ ಕರ್ನಾಟಕ ಉಡುಪಿ ಅಭಿವೃದ್ಧಿ ಆಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಸಮರ್ಥ ನಾಯಕತ್ವ ಕೊರತೆಯಿಂದ ಅಭಿವೃದ್ದಿ  ಹಿನ್ನಡೆಯಾಗಿದೆ. ಹೀಗಾಗಿ ಮಂಕಾಳ ವೈದ್ಯ ಅವರನ್ನ ಸಚಿವರನ್ನಾಗಿ ಮಾಡಬೇಕೆಂದು ಮುಖಂಡರಾದ ಜೈ ವಿಠ್ಠಲ ಕುಬಾಲ್ ಹೇಳಿದರು.

ಜಿಲ್ಲಾ ಮೀನು ಮಾರಾಟ ಪೆಢರೇಶನ್ ಜಿಲ್ಲಾಧ್ಯಕ್ಷ  ರಾಜು ತಾಂಡೇಲ ಮಾತನಾಡಿ, ಮೀನುಗಾರಿಕಾ ವಲಯದಲ್ಲಿ ಹಲವು ಸಮಸ್ಯೆಗಳಿದೆ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗಿಂತ ತಮ್ಮ ಜಿಲ್ಲೆ ಇನ್ನು 10ವರ್ಷ ಹಿಂದಿದ್ದೇವೆ. ಉಳಿದ ಜಿಲ್ಲೆಗಳಲ್ಲಿ ಹೊರಭಾಗದವರು ಬಂಡವಾಳ ಹಾಕಿ ಮೀನುಗಾರಿಕೆ ಮಾಡುತ್ತಿದ್ದಾರೆ. ಇಲ್ಲಿ ನೈಜ ಮೀನುಗಾರರೇ ಬೋಟ್ ಮಾಡಿಕೊಂಡು ಜೀವನ‌ ನಡೆಸುತ್ತಿದ್ದಾರೆ. ಆದ್ರೆ ಚುನಾವಣೆ ಒಂದು ದಿನ ಮಾತ್ರ. ಉಳಿದ ದಿನಗಳಲ್ಲಿ ಮೀನುಗಾರರು ಒಟ್ಟಾಗಿ ಹೋರಾಟ ಮಾಡಬೇಕೆಂದರು.

ಸಾಗರಮಾಲಾ ಯೋಜನೆಗಾಗಿ ಸತೀಶ ಸೈಲ್ ಸಹಾಯ ಮಾಡಿದ್ದರು. ಮೀನುಗಾರಿಕೆ ಬಂದರು ಅಭಿವೃದ್ಧಿ ಮಾಡಿ. ವಾಣಿಜ್ಯ ಬಂದರು ಅಭಿವೃದ್ಧಿ ಮಾಡೋದು ಸರಿಯಲ್ಲ. ಇಲ್ಲಿ ನಾಯಕತ್ವದ ಕೊರತೆ ಇದೆ. ಮೀನುಗಾರರಿಗೆ ಬೇಡವಾದ ಯೋಜನೆ ವಿರೋಧಿಸಲು ನಾವು  ಸಿದ್ದರಾಗುತ್ತೇವೆಂದು ಹೇಳಿದರು. ಕರಾವಳಿಯ ಅಭಿವೃದ್ಧಿಗೆ ಎರಡು ಬಾರೀ ಆಯ್ಕೆಯಾದ ಮಂಕಾಳ ವೈದ್ಯ ಅವರನ್ನ ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯಿಸಿದರು.

ಹೊನ್ನಾವರದ ಹಮ್ಜಾ ಪಟೇಲ್ ಮತ್ತು ಅಂಕೋಲಾದ ರಾಜು ಹರಿಕಂತ್ರ  ಮಾತನಾಡಿ, ಮೀನುಗಾರಿಕಾ ಕುಟುಂಬದಲ್ಲಿ ಜನಿಸಿದ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡಬೇಕು. ಮೀನುಗಾರರ ಬಗ್ಗೆ ಗಂಧಗಾಳಿ ಗೊತ್ತಿಲ್ಲದವರಿಗೆ ನೀಡೋದು ಸರಿಯಲ್ಲ.  ವೈದ್ಯರನ್ನ ಮಂತ್ರಿಯಾಗಿಸಿದರೇ, ಮುಂದಿನ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಗಣೇಶ ಅಂಬಿಗ ಮಿರ್ಜಾನ್, ಭಟ್ಕಳದ ಜಟಕಾ ಮೊಗೇರ, ಬಾಬು ಕುಬಾಲ್, ವೆಂಕಟ್ರಮಣ ಮೊಗೇರ, ಜಗದೀಶ ಹರಿಕಾಂತ,  ಶಿವರಾಮ ಹರಿಕಾಂತ ಕಿಮಾನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.