ಸುದ್ದಿಬಿಂದು ಬ್ಯೂರೋ
ಕುಮಟಾ
: ತಾಲೂಕಿನ ಮಾಸೂರು ಬಳಿ ನದಿ ಸಮೀಪ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹತ್ತಾರು ಟನ್ ಮರಳನ್ನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

ಹೆಗಡೆ ಗ್ರಾಮದ ಮಾಸೂರು ಬಳಿ ಹತ್ತಕ್ಕೂ‌ ಹೆಚ್ಚು ಟನ್ ಮರಳನ್ನ ವಶಕ್ಕೆ ಪಡೆಯಲಾಗಿದೆ. ನಿನ್ನೆ (ಬುಧವಾರ) ಸಂಜೆ ವೇಳೆ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದ ಮರಳನ್ನ ಸಾಗಾಟ ಮಾಡಲು ಮಹಿಳಾ ಅಧಿಕಾರಿ ರಾತ್ರಿ ಪೂರ್ತಿ ಸ್ಥಳದಲ್ಲೆ ಉಳಿದುಕೊಂಡು ಜಪ್ತು ಮಾಡಲಾದ ಮರಳನ್ನ ಬೇರೆಡೆ ಸಾಗಾಟ ಮಾಡಿದ್ದಾರೆ.

ಟಿಪ್ಪರ್ ನೀಡಲು ಮರಳು ದಂಧೆಕೋರರ ಹಿಂದೆಟ್ಟು

ಜಪ್ತು ಮಾಡಿಕೊಳ್ಳಲಾದ ಮರಗಳನ್ನ ಸ್ಥಳದಿಂದ ಇಲಾಖೆಗೆ ಸಂಬಂಧಿಸಿದ ಸ್ಥಳಕ್ಕೆ ಸಾಗಾಟ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗಳು ಟಿಪ್ಪರ್ ಹೊಂದಿರುವ ಒಂದಿಷ್ಟು ಮಂದಿ ಬಳಿ ಕೇಳಿಕೊಂಡಿದ್ದಾರೆ. ಎನ್ನಲಾಗಿದೆ. ಆದರೆ ಕೆಲವರು ತಮ್ಮ ಟಿಪ್ಪರ್ ನೀಡಲು ಮುಂದಾಗಿದ್ದರು.ಆದರೆ ಟಿಪ್ಪರ್ ನೀಡಲು ಮುಂದಾಗುವವರನ್ನ ಸಂಪರ್ಕಿಸಿದ ಈ ಮರಳು ದಂಧೆಕೋರರು ಯಾವುದೆ ಕಾರಣಕ್ಕೂ ಟಿಪ್ಪರ್ ಕಳುಹಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನೂ ಒಂದೇರಡು ಟಿಪ್ಪರ್ ಜಪ್ತು ಮಾಡಲಾಗಿದ್ದ ಮರಳನ್ನ ಸಾಗಾಟ ಮಾಡಲು ತೆರಳಿದ್ದರು ಎನ್ನಲಾಗಿದ್ದು, ಅಂತಹ ಟಿಪ್ಪರ್ ಗಳನ್ನ ಈ ಮರಳು ದಂಧೆಕೋರರು ಮಧ್ಯದಲ್ಲಿ ತಡೆದು ವಾಪಸ್ ಕಳುಹಿಸಿರುವ ಬಗ್ಗೆ ಸಹ ಮಾಹಿತಿ ಲಭ್ಯವಾಗಿದೆ.
ಇತ್ತೀಚೆಗೆ ಗಣಿ-ಭೂ ವಿಜ್ಞಾನ ಇಲಾಖೆಗೆ ಆಶಾ ಎಂಬುವವರು ನೇಮಕಗೊಂಡ ಬಳಿಕ ಅನೇಕ ಕಡೆಯಲ್ಲಿ ದಾಳಿ ನಡೆಸಿ ಅಕ್ರಮ ಮರಳು ದಂಗೆಕೋರರ ನಿದ್ದೆಗೆಡಿಸುತ್ತಿದ್ದಾರೆ. ಇದರಿಂದಾಗಿ ಕಂಗಾಲಾಗಿರುವವ ಈ ದಂಧೆಕೋರರು ಈ ಅಧಿಕಾರಿ ಅವರಿಗೆ ಭಯ ಹುಟ್ಟಿಸುವ ಕೆಲಸವನ್ನೂ ಸಹ ಮಾಡುತ್ತಿರುವ ಬಗ್ಗೆ ಸಹ ಕೇಳಿ ಬರುತ್ತಿದೆ.