ಸುದ್ದಿಬಿಂದು ಬ್ಯೂರೋ
ಕಾರವಾರ: ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಜಿಲ್ಲೆಯ ಪತ್ರಕರ್ತರಿಗಾಗಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮೀಡಿಯಾ ಕಪ್ ಕ್ರಿಕೆಟ್ ಟೂರ್ನಿಮೆಂಟ್‌ನ್ನು ಫೆ.4 ಮತ್ತು 5 ರಂದು ಆಯೋಜಿಸಲಾಗಿದೆ.
ನಗರದ ಮಾಲಾದೇವಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು ಜಿಲ್ಲೆಯ ಎಲ್ಲ ತಾಲೂಕಿನ ಪತ್ರಕರ್ತರು ಸೇರಿ ಒಟ್ಟು 10ತಂಡಗಳು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಎರಡು ದಿನದ ಪಂದ್ಯಾವಳಿಯನ್ನು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಶಾಸಕ ಸತೀಶ್ ಸೈಲ್, ಭೀಮಣ್ಣ ನಾಯ್ಕ, ಶಿವರಾಮ್ ಹೆಬ್ಬಾರ್, ದಿನಕರ ಶೆಟ್ಟಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಪ್ರತಿ ತಂಡದಲ್ಲಿ ನಾಲ್ವರು ವಿಐಪಿ ಆಟಗಾರರು ಭಾಗವಹಿಸುವುದರಿಂದ ಪಂದ್ಯಗಳು ರೋಚಕವಾಗುವ ನಿರೀಕ್ಷೆ ಮೂಡಿದೆ.ಪಂದ್ಯದಲ್ಲಿ ಚಾಂಪಿಯನ್ ಆದ ತಂಡಕ್ಕೆ ರು 30ಸಾವಿರ ಹಾಗೂ ರನ್ನರ್ ಅಪ್ ತಂಡಕ್ಕೆ ರು. 20 ಸಾವಿರ ನಗದು ಸೇರಿ ಆಕರ್ಷಕ ಟ್ರೋಫಿ ನೀಡಲಾಗುವುದು. ಇದರೊಂದಿಗೆ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ವೈಯಕ್ತಿಕ ಬಹುಮಾನಗಳು ಕೂಡ ನೀಡಲಾಗುವುದು ಎಂದು ಜಿಲ್ಲಾ ಪತ್ರಿಕಾಭವನ ಸಮಿತಿ ತಿಳಿಸಿದೆ.