ಕಾರವಾರ : ನಗರದ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಮಾಜಾಳಿ ಗ್ರಾಮ ಪಂಚಾಯತ್ ನ ಪಿಡಿಓ ಸಮಸ್ಯೆ ಕುರಿತು ಮಾಜಿ ಶಾಸಕ ಸತೀಶ್ ಸೈಲ್ ಸಿಇಒ ಬಳಿ ಮಾತನಾಡಲು ಹೋಗಿದ್ದರು. ಇದೇ ವೇಳೆ ಹಾಲಿ ಶಾಸಕಿ ರೂಪಾಲಿ ನಾಯ್ಕ ಸಹ ಸಿಇಓ ಕಚೇರಿಗೆ ಆಗಮಿಸಿದ್ದು ಈ ವೇಳೆ ಇಬ್ಬರ ನಡುವೆ ಜಟಾಪಟಿ ಉಂಟಾಗಿ ಪ್ರಕರಣ ಪೊಲೀಸ್ ಮೆಟ್ಟಿಲು ಏರಿರುವ ಘಟನೆ ನಡೆದಿದೆ.
ಮಾಜಾಳಿ ಗ್ರಾಮಪಂಚಾಯತದಲ್ಲಿ ಈ ಹಿಂದೆ ಇದ್ದ ಪಿಡಿಓ ಅವರನ್ನ ವರ್ಗಾವಣೆ ಮಾಡಿ ಬೇರೆಯವರನ್ನ ನೇಮಕಮಾಡಲಾಗಿದೆ. ಆದರೆ ಮಾಜಾಳಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊಂಕಣಿ ಭಾಷಿಕರೆ ಹೆಚ್ಷಾಗಿದ್ದು, ಹೊಸದಾಗಿ ನೇಮಕಗೊಂಡಿರುವ ಪಿಡಿಓ ಅವರಿಗೆ ಕೊಂಕಣಿ ಭಾಷೆ ಬಾರದೆ ಇರುವುದರಿಂದ ಭಾಷೆ ಹೊಂದಾಣಿಕೆ ಆಗದೆ ಇರುವ ಕಾರಣ ಹೊಸದಾಗಿ ಬಂದ ಬದಲಾವಣೆ ಮಾಡಿ ಈ ಹಿಂದೆ ಇದ್ದ ಪಿಡಿಓ ಅವರನ್ನ ನೇಮಕ ಮಾಡಬೇಕು ಎನ್ನುವುದು ಅಲ್ಲಿನ ಗ್ರಾಮಸ್ಥರ ಒತ್ತಾಯವಾಗಿದೆ.
ಇದೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಶಾಸಕ ಸತೀಶ ಅವರು ಅಲ್ಲಿನ ಗ್ರಾಮಸ್ಥರೊಂದಿಗೆ ಸೇರಿಕೊಂಡಿ ಪಿಡಿಓ ಬದಲಾವಣೆ ಬಗ್ಗೆ ಮಾತನಾಡಲು ಜಿಲ್ಲಾ ಪಂಚಾಯತ ಸಿಇಓ ಅವರ ಬಳಿ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದ ಶಾಸಕಿ ರೂಪಾಲಿ ನಾಯ್ಕ ಸಹ ಸಿಇಓ ಅವರ ಕಚೇರಿ ಒಳಗೆ ಹೋಗಿದ್ದಾರೆ. ಆ ಸಮಯದಲ್ಲಿ ಸಿಇಓ ಅವರು ಸೈಲ್ ಬಳಿ ಮಾತನಾಡುತ್ತಿದ್ದಾಗ ಬಿಟ್ಟು ಶಾಸಕಿ ರೂಪಾಲಿ ನಾಯ್ಕ ಅವರ ಬಳಿ ಅದೆ ವಿಚಾರವಾಗಿ ಮಾತುಕತೆ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಸಮಯದಲ್ಲಿ ಸತೀಶ ಸೈಲ್ ಅವರು ಮಾತನಾಡಿದ ಸಮಯದಲ್ಲಿ ಶಾಸಕಿ ರೂಪಾಲಿ ನಾಯ್ಕ ಸತೀಶ ಸೈಲ್ ಅವರನ್ನ ಉದ್ದೇಶಿ ಅವಾಚ್ಯ ಶಬ್ದದಿಂದ ಮಾತನಾಡಿದ್ದು, ಈ ವೇಳೆ ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಮಾತಿಗೆ ಮಾತು ಬೆಳೆದು ಶಾಸಕಿ ರೂಪಾಲಿ ನಾಯ್ಕ ಅವರು ಸೈಲ್ ಅವರಿಗೆ ಕುಡಿದುಕೊಂಡು ಬಂದಿದ್ದಾರೆ ಎಂದು ಆರೋಪಿಸಿ ಅಲ್ಲೆ ಇದ್ದ ಪೇಪರ್ ವೇಟರ್ ತೆಗೆದುಕೊಂಡು ಹೊಡೆಯಲು ಮುಂದಾಗಿದ್ದಾರೆ ಎಂದು ಸೈಲ್ ಮಾಧ್ಯಮದ ಎದುರು ಹೇಳಿಕೊಂಡಿದ್ದಾರೆ..
ಇದೆ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇದೀಗ ಹಾಲಿ ಹಾಗೂ ಮಾಜಿ ಶಾಸಕರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನ ಕೂಡ ದಾಖಲಿಸಿದ್ದಾರೆ. ಸೈಲ್ ಅವರು ನಮ್ಮಗೆ ಅವಾಚ್ಯವಾಗಿ ಮಾತನಾಡಿರುವುದಾಗಿ ಶಾಸಕಿ ರೂಪಾಲಿ ನಾಯ್ಕ ದೂರು ದಾಖಲಿಸಿದ್ದಾರೆ.
ವೈದ್ಯಕೀಯ ತಪಾಸಣೆ ಮಾಡಿಸಿಕೊಂಡ ಸೈಲ್
ಶಾಸಕಿ ರೂಪಾಲಿ ನಾಯ್ಕ ಅವರು ಸತೀಶ ಸೈಲ್ ಕುಡಿದುಕೊಂಡು ಬಂದಿದ್ದಾರೆ ಎಂದು ಹೇಳಿದ ಮಾತಿಗೆ. ಸೈಲ್ ಅವರು ಸ್ವಯಂ ಪ್ರೇರಣೆಯಿಂದ ತಾವೆ ಕಾರವಾರದ ಜಿಲ್ಲಾ ಆಸ್ಪತ್ರೆ ತೆರಳಿ ಮಧ್ಯ ಸೇವೆ ಬಗ್ಗೆ ತಪಾಷಣೆ ಮಾಡಿಸಿಕೊಂಡಿದ್ದು, ವೈದ್ಯಕೀಯ ಪ್ರಥಮ ವರದಿಯಲ್ಲಿ ಸತೀಶ ಸೈಲ್ ಅವರು ಮಧ್ಯ ಸೇವನೆ ಮಾಡಿಲ್ಲ ಎನ್ನುವ ಬಗ್ಗೆ ವರದಿ ಬಂದಿದ್ದು, ಇನ್ನೂ ಅವರ ರಕ್ತವನ್ನ ಹೆಚ್ಚಿನ ತಪಾಸಣೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು,ಇನ್ನೂ ಕೆಲ ದಿನಗಳಲ್ಲಿ ಆ ವರದಿ ಕೂಡ ಸತೀಶ ಸೈಲ್ ಅವರ ಕೈಗೆ ಸಿಗಲಿದೆ.