ಕಾರವಾರ : ನಗರದ ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಮಾಜಾಳಿ ಗ್ರಾಮ ಪಂಚಾಯತ ಪಿಡಿಓ ಬದಲಾವಣೆ ಕುರಿತ ವಿಚಾರಕ್ಕೆ ಸಂಬಂಧಿಸಿ ಕಾರವಾರ ಮಾಜಿ ಶಾಸಕ ಸತೀಶ ಸೈಲ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವಾಗ ಆಗಮಿಸಿದ ಹಾಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಸೈಲ್ ನಡುವೆ ಮಾತುಕತೆ ಉಂಟಾಗಿ ಪ್ರಕರಣ ಇದೀಗ ಪೊಲೀಸ್ ಮೆಟ್ಟಿಲು ಏರುವ ಪ್ರಸಂಗವೊಂದು ನಡೆದಿದೆ.

ಮಾಜಾಳಿ ಪಂಚಾಯತಕ್ಕೆ ಹೊಸದಾಗಿ ಪಿಡಿಓ ನೇಮಕವಾಗಿದ್ದಾರೆ‌. ಮಾಜಾಳಿ ವ್ಯಾಪ್ತಿಯಲ್ಲಿ ಕೊಂಕಣಿ ಮಾತನಾಡುವವರುವ ಕಾರಣ ಈಗ ಬಂದಿರುವ ಪಿಡಿಓ ಅವರಿಗೆ ಕೊಂಕಣ ಭಾಷೆ ಮಾತನಾಡಲು ಬರದೆ ಇರುವುದರಿಂದ ಅಲ್ಲಿನ ಜನರಿಗೆ ಅವರೊಂದಿಗೆ ಗ್ರಾಮದಲ್ಲಿನ ಸಮಸ್ಯೆಯ ಬಗ್ಗೆ ಮಾತನಾಡಲು ಸಮಸ್ಯೆ ಉಂಟಾಗಿತ್ತು ಎನ್ನಲಾಗಿದೆ.

ಆ ಕಾರಣಕ್ಕೆ ಆ ಭಾಗದ ಕೆಲವರು ಕಳೆದ ಕೆಲ ದಿನಗಳಿಂದ ಈ ಹಿಂದೆ ಇದ್ದ ಪಿಡಿಓ ಅವರನ್ನೆ ವಾಪಸ್ ಕರೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ಸತೀಶ ಸೈಲ್ ಬಳಿ ಮಾಜಾಳಿ ಗ್ರಾಮಸ್ಥರು ಹೇಳಿಕೊಂಡಿದ್ದರು. ಹಿನ್ನಲೆಯಲ್ಲಿ ಸೈಲ್ ಇದೆ ವಿಚಾರಕ್ಕೆ ಸಂಬಂಧಿಸಿ ಇಂದು ಜಿಲ್ಕಾ ಪಂಚಾಯತ ಸಿಇಓ ಅವರ ಬಳಿ ಮಾತುಕತೆಗೆ ಹೋಗಿದ್ದ ಸಮಯದಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರು ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ.

ಈ ವೇಳೆ ಸಿಇಓ ಅವರು ಸೈಲ್ ಬಳಿ ಮಾತನಾಡುವುದನ್ನ ಅರ್ಧಕ್ಕೆ ನಿಲ್ಲಿಸಿ ಹಾಲಿ ಶಾಸಕ ಬಳಿ ಮಾತನಾಡುತ್ತಿದ್ದರು ಎನ್ನಲಾಗಿದ್ದು, ಆಗ ಸೈಲ್ ಅವರು ಪುನಃ ಪಿಡಿಓ ವಿಚಾರವನ್ನ ಅಧಿಕಾರಿಗಳ ಗಮನಕ್ಕೆ ತರುವ ವೇಳೆ ರೂಪಾಲಿ ನಾಯ್ಕ ಅವರು ಕುಳಿತ ಸ್ಥಳದಿಂದ ಎದ್ದು ಬಂದ ರೂಪಾಲಿ ನಾಯ್ಕ ಸೈಲ್ ಅವರಿಗೆ ನೀಡು ಕುಡುಕ, ದಿನ ಪೂರ್ತಿ ಕುಡಿದುಕೊಂಡೆ ಇರತ್ತೀಯಾ ಎಂದು ಅವಾಚ್ಯ ಶಬ್ದದಿಂದ ಬೈದು ಶಾಸಕಿ ರೂಪಾಲಿ ನಾಯ್ಕ ಹಲ್ಲೆಗೂ ಮುಂದಾಗಿರುವುದಾಗಿ ಸೈಲ್ ಇದೀಗ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇನ್ನೂ ಇದೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕಿ ರೂಪಾಲಿ ನಾಯ್ಕ ಸಹ ಠಾಣೆಗೆ ಹಾಜರಾಗಿ ಮಾಜಿ ಶಾಸಕ ಸತೀಶ ಸೈಲ್ ವಿರುದ್ದ ಕೂಡ ಇದೀಗ ಪ್ರಕರಣ ದಾಖಲಾಗಿದೆ.

ಸ್ವಯಂ ಪ್ರೇರಿತವಾಗಿ ಸೈಲ್ ವೈದ್ಯಕೀಯ ತಪಾಸಣೆ


ಶಾಸಕಿ ರೂಪಾಲಿ ನಾಯ್ಕ ಅವರು ಸತೀಶ ಸೈಲ್ ಕುಡಿದುಕೊಂಡು ಇರುತ್ತಾರೆ ಎಂದು ಆರೋಪಿಸಿದ್ದ ಹಿನ್ನಲೆಯಲ್ಲಿ ಸತೀಶ ಸೈಲ್ ತಕ್ಷಣ ಕಾರವಾರ ಜಿಲ್ಲಾ ಆಸ್ಪತ್ರೆ ತೆರಳಿ ಮದ್ಯ ಸೇವೆ ಮಾಡಿದ್ದಾನೋ ಇಲ್ಲವೋ ಎನ್ನುವ ಬಗ್ಗೆ ತಪಾಸಣೆ ಮಾಡಿಸಿಕೊಂಡಿದ್ದಾರೆ.

ವೈದ್ಯಕೀಯ ಪ್ರಥಮ ಹಂತದ ವೈದ್ಯಕೀಯ ಪರೀಕ್ಷೆಯಲ್ಲಿ ಸತೀಶ್ ಸೈಲ್ ಮಧ್ಯಸೇವನೆ ಮಾಡಿಲ್ಲ ಎನ್ನುವುದು ಮೊದ ಹಂತದ ವೈದ್ಯಕೀಯ ತಪಾಸಣೆಯಿಂದ ತಿಳಿದು ಬಂದಿದೆ, ಇನ್ನೂ ಅವರನ್ನ ರಕ್ತವನ್ನ ಸಂಗ್ರಹಿಸಿರುವ ವೈದ್ಯರು ಹೆಚ್ಷಿನ ತಪಾಸಣೆಗಾಗಿ ಮಂಗಳೂರು ಆಸ್ಪತ್ರೆಗೆ ರಕ್ತವನ್ನ ಕಳುಹಿಸಲಾಗಿದೆ.