ಸುದ್ದಿಬಿಂದು ಬ್ಯೂರೋ
ಅಂಕೋಲಾ :ಮನೆಯ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿ.ಮನೆಯಲ್ಲಿ ಅಡಗಿಸಿಟ್ಟಿದ್ದ ಮದ್ಯ ವಶಕ್ಕೆ ಪಡೆಯಲಾಗಿದ್ದು ಆರೋಪಿಗಳು ಪರಾರಿಯಾಗಿರುವ ಘಟನೆ ಹಾರವಾಡ ಗ್ರಾಮದ ತರಂಗಮೇಟದಲ್ಲಿ ನಡೆದಿದೆ.
ಹರಿಕಂತ್ರವಾಡದ ಶ್ವೇತಾ ಆನಂದ್ ಹರಿಕಂತ್ರ ಎಂಬುವವರ ಮನೆಯ ಮೇಲೆ ಈ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ₹3,22,000 ಮೌಲ್ಯದ 324,000 ಲೀಟರ್ ಗೋವಾ ಪೆನ್ನಿ, 280,000 ಲೀಟರ್ ಗೇರು ಹಣ್ಣಿನಿಂದ ತಯಾರಾದ ಪೆನ್ನಿ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ನಿರೀಕ್ಷಕ ರಾಹುಲ್ ಎಂ ನಾಯ್ಕ ಮಾರ್ಗದರ್ಶನದಲ್ಲಿ ಪ್ರಶಿಕ್ಷಣಾರ್ಥಿ ಉಪನಿರೀಕ್ಷಕಿ ಮಧುರ ದಾಸ್ ,ಸಿಬ್ಬಂದಿಗಳಾದ ಈರಣ್ಣ,ಶ್ರೀಶೈಲ ಹಡಪದ,ರವಿ,ಗಿರೀಶ್ ಮೊದಲಾದವರು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಅಂಕೋಲಾ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವವರಿಗಾಗಿ ಶೋಧ ನಡೆಸಲಾಗುತ್ತಿದೆ