ಸುದ್ದಿಬಿಂದು ಬ್ಯೂರೋ
ಕಾರವಾರ: ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರೊಬ್ಬರ ಚಿನ್ನಾಭರಣವಿರುವ ಎರಡು ಟ್ರಾಲಿ ಬ್ಯಾಗ್ ಕಳ್ಳತನವಾಗಿರುವ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮಿಳುನಾಡಿನ ಅರಮನೈಪೊಡುರ ನಿವಾಸಿ ಕಾನಾರಾಮ ಎಂಬುವವರ ಬ್ಯಾಗ್ ಕಳುವಾಗಿದೆ. ಇವರು ಕೊಯಂಬತ್ತೂರ್‌ಗೆ ಹೋಗುವ ಎಸಿ ಸೂಪರ ಫಾಸ್ಟ್ ಎಕ್ಸಪ್ರೇಸ್ ಟ್ರೇನ್‌ನಲ್ಲಿ ಉಡುಪಿಯಿಂದ ಕಾರವಾರ ಕಡೆಗೆ ಪ್ರಯಾಣಿಸುತ್ತಿರುವಾಗ ಎರಡು ಟ್ರಾಲಿ ಬ್ಯಾಗ್‌ಗಳನ್ನು ಕಳುವು ಮಾಡಲಾಗಿದೆ.
ಆ ಬ್ಯಾಗ್‌ನಲ್ಲಿ ಚಿನ್ನದ ಆಭರಣ, ಸೊಂಟದ ಬೆಳ್ಳಿ ಚೈನ್ ಸೇರಿದಂತೆ 1 ಸಾವಿರ ರೂ ನಗದು ಸೇರಿದಂತೆ ಸುಮಾರು 1.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳುವಾಗಿದೆ. ಈ ಸಂಬಂಧ ಚಿಪ್ಪುನ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.