suddibindu.in
ದಾಂಡೇಲಿ : ನಗರದ ಬಸ್ ನಿಲ್ದಾಣದ ಮುಂಭಾಗದ ಜೆ.ಎನ್ ರಸ್ತೆಯಲ್ಲಿ ಜಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ಪರಸ್ಪರ ಜಗಳವಾಗಿ, ಅವಾಚ್ಯ ಶಬ್ದಗಳಿಂದ ಬೈದು ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ
.

ಸುಧಾ ಪ್ರದೀಪ ನಟೇಶ್ ಹಲ್ಲೆಗೊಳಗಾದ ಮಹಿಳೆಯಾಗಿದ್ದಾಳೆ ಇಂಷು ಬೆಳಿಗ್ಗೆ ಇವರು ತಮ್ಮ ಮನೆಯ ಹಿಂಬದಿಯಲ್ಲಿರುವ ತಮ್ಮ ಸ್ವಂತ ಜಾಗದಲ್ಲಿ ಕಂಬ ಹಾಕುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪಕ್ಕದ ಕಟ್ಟಡ ಅಂದರೆ ವಸತಿ ಲಾಡ್ಜ್ ನ ಮಾಲಕನಾದ ಅಸ್ಲಾಂ ನೀರಲಗಿ ಈತನು ಇಲ್ಲಿ ಯಾಕೆ ಕೆಲಸ ಮಾಡುತ್ತಿದ್ದಿ ಎಂದು ಅವಾಚ್ಯ ಶಬ್ದಗಳಿಂದ ಬೈದು, ಸುಧಾ ಪ್ರದೀಪ ನಟೇಶ ಅವರ ಕೈಯನ್ನು ಹಿಡಿದು ಎಳೆದಾಡಿ, ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ ಚೈನನ್ನು ಹಿಡಿದು ಜಗ್ಗಿ ಹರಿದು, ಕೈಯಿಂದ ಎಡ ಭುಜಕ್ಕೆ ಹೊಡೆದು, ಎಳೆದಾಡಿ ಅವರು ಧರಿಸಿದ್ದ ವೇಲನ್ನು ಹರಿದು ಅವಮಾನ ಪಡಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಸುಧಾ ಪ್ರದೀಪ ನಟೇಶ ಅವರು ದೂರಿನಲ್ಲಿ ವಿವರಿಸಿದ್ದಾರೆ.

ನ್ಯಾಯಕ್ಕಾಗಿ ತಾನು ದೂರು ನೀಡಿದ್ದು, ನನಗೆ ದೂರು ನೀಡದಂತೆ ಬೆದರಿಕೆ ಹಾಗೂ ಎಸ್ಸಿ- ಎಸ್ಟಿ ದೌರ್ಜನ್ಯ ಪ್ರಕರಣದಡಿ ದೂರು ದಾಖಲಿಸುವುದಾಗಿ ಬೆದರಿಕೆ ನೀಡುತ್ತಿದ್ದಾನೆ ಎಂದು ಸುಧಾ ಪ್ರದೀಪ್ ನಟೇಶ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಮಾಧ್ಯಮದ ಜೊತೆ ಮಾತನಾಡಿದ ಅಸ್ಲಾಂ ನೀರಲಗಿ ಈತನು ತನಗೆ ಹಾಗೂ ತನ್ನ ಸಿಬ್ಬಂದಿಗೆ ಬೈದು ಹಲ್ಲೆ ಮಾಡಲು ಸುಧಾ ಪ್ರದೀಪ ನಟೇಶ ಬಂದಿದ್ದರೆಂದು ಆರೋಪಿಸಿದ್ದಾನೆ.

ಇದೀಗ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಗರ ಠಾಣೆಯ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ