www.suddibindu.in
ಬೆಳಗಾವಿ : ಮಹಿಳೆಯರ ನಗ್ನ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಬೆಳಗಾವಿಯಲ್ಲಿ ಹೆಚ್ಚಾಗ ಬೆಳಕಿಗೆ ಬರುತ್ತಿದೆ. ಮುಂಬೈ ಕ್ರೈಂ ಬ್ರ್ಯಾಂಚ್, ಗುಪ್ತಚರ ಇಲಾಖೆಯಿಂದ ಎಂದು ಹೇಳಿಕೊಂಡು ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ.
ಈ ಕುರಿತು ಈಗಾಗಲೇ ಬೆಳಗಾವಿ ಸೈಬರ್ ಎಕನಾಮಿಕ್ಸ್ ಹಾಗೂ ನಾರ್ಕೋಟಿಕ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ವಾಟ್ಸಪ್, ಮೆಸೇಜ್ ಅಥವಾ ಪೋನ್ ಕರೆ ಮಾಡಿ ಕ್ರೈಂ ಬ್ರ್ಯಾಂಚ್ ನಿಂದ ಅಥವಾ ಗುಪ್ತಚರ ಇಲಾಖೆಯಿಂದ ಕರೆ ಮಾಡಲಾಗುತ್ತಿದೆ ಎಂದು ಹೇಳಿ ನಿಮ್ಮ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ ಎಂದು ಬೆದರಿಕೆ ಹಾಕುತ್ತಾರಂತೆ.
ಬಳಿಕ ಮೊಬೈಲ್ ವಾಟ್ಸಾಪ್ ಕಾಲ್ ಮೂಲಕ ನಿಮ್ಮನ್ನ ವಿಚಾರಣೆ ಮಾಡತ್ತೇವೆ ಅಂತಾ ಹೇಳಿ ವಿಡಿಯೋ ಕಾಲ್ ಮಾಡಿ ವಿಚಾರಣೆ ಮಾಡುವುದಾಗಿ ಹೇಳುತ್ತಾರೆ ಅಷ್ಟಕ್ಕೆ ಸುಮ್ಮನಾಗದ ಖದೀಮರು ಆ ಮಹಿಳೆಯಗೆ ಕ್ಯಾಮರಾ ಎದುರಿಗೆ ಬರುವಂತೆ ತಿಳಿಸುತ್ತಾರೆ. ನಿದಾನವಾಗಿ ಅವರಿಗೆ ಬೆದರಿಸುತ್ತಾರೆ. ವಿಚಾರಣೆ ನೆಪದಲ್ಲಿ ಬಟ್ಟೆ ತೆಗೆಯುವಂತೆ ಹೇಳಿ ನಗ್ನ ದೇಹಗಳ ಸ್ಕ್ರೀನ್ ಶಾಟ್ ಮೂಲಕ ರೆಕಾರ್ಡ್ ಮಾಡಿಕೊಂಡು ಬಳಿಕ ಕರೆ ಕಟ್ ಮಾಡಿ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ.
ಹೀಗಾಗಿ ಯಾವುದೆ ಮಹಿಳೆಯರಿಗೆ ಇಂತಹ ಕರೆಗಳು ಬಂದರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದ್ದು, ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಲ್ಲಿ ಈ ರೀತಿಯ ವಿಚಾರಣೆ ನಡೆಯುವುದಿಲ್ಲ. ಹೀಗಾಗಿ ಇಂತಹ ಖದೀಮರಿಂದ ಬರುವ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಒಂದು ವೇಳೆ ಯಾರಿಗಾದರೂ ಇಂತಹ ಕರೆ ಬಂದರೆ ತಕ್ಷಣ ಪೊಲೀಸರ ಗಮನಕ್ಕೆ ತರುವಂತೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ತಿಳಿಸಿದ್ದಾರೆ.
ಇದನ್ನೂ ಓದಿ