ಸುದ್ದಿಬಿಂದು ಬ್ಯೂರೋ
ಕಾರವಾರ : ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚಾರಣೆ ಕಾರ್ಯಕ್ರಮವನ್ನು ಸೆ.27ರಂದು ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿರುವ ಆಜ್ವೀ ಸಭಾಂಗಣದಲ್ಲಿ ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಎಂಬ ಸಂದೇಶದೊಂದಿಗೆ ಆಚರಿಸಲಾಗುತ್ತದೆ.

ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅಂದು ಬೆಳಗ್ಗೆ 6:30 ಕ್ಕೆ ಸೈಕಲ್ ಸ್ಪರ್ಧೆ ನಡೆಯಲಿದೆ 9ಗಂಟೆಗೆ ಹಗ್ಗಜಗ್ಗಾಟ, ಗೋಣಿ ಚಿಲ ಓಟ,ನಿಂಬೆಹಣ್ಣು ಚಮಚ ಓಟ, ಗಾಳಿಪಟ ಸ್ಪರ್ಧೆ ಮರುಳು ಶಿಲ್ಪ, ಸೈಕಲ್ ಜಾಥ,ಸ್ಪರ್ಧೆ ನಡೆಯಲಿದೆ .

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರು ವಿಳಾಸ ಭಾಗ ವಹಿಸುವ ಸ್ಪರ್ಧೆಗಳನ್ನು ಸೆ25 ರ ಸಂಜೆ 5ಗಂಟೆ ಒಳಗೆ ದೂ. ಸಂ:0882-221172 ಇ ಮೇಲ್ ddtourismkarwar@gmail.com ಅಥವಾ ಮೊ.ಸಂ:8618404610, 8073890611 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಉಪನಿರ್ದೇಶಕರು ಪ್ರವಾಸೋಧ್ಯಮ ಇಲಾಖೆ ಅವರು ತಿಳಿಸಿದ್ದಾರೆ.