ನವದೆಹಲಿ: ದೇಶದಲ್ಲಿ ನೋಟು ಅಮಾನೀಕರಣದ ಬಳಿಕ 2ಸಾವಿರ ಮುಖ ಬೆಲೆಯ ಹೊಸ ನೋಟನ್ನು ಭಾರತೀಯ ರಿಸರ್ವ್ ಬ್ಯಾಕ್ ಬಿಡುಗಡೆ ಮಾಡಿತ್ತು. ಆದರೆ ಇದೀಗ 2ಸಾವಿರ ಮುಖ ಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಕ್ ಹಿಂಪಡೆಯುವಂತೆ ಘೋಷಣೆ ಮಾಡಿದೆ.

ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2 ಸಾವಿರ ರೂಪಾಯಿ ನೋಟನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ಬದಲಾವಣೆ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2 ಸಾವಿರ ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ. ಆದರೆ ಈಗಿರುವ ನೋಟುಗಳು ಅಮಾನ್ಯವಾಗುವುದಿಲ್ಲ.

2016ರ ನವೆಂಬರ್‌ನಲ್ಲಿ 2 ಸಾವಿರದ ನೋಟು ಚಲಾವಣೆಗೆ ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ನೋಟುಗಳನ್ನು ಬಂದ್ ಮಾಡಿದ್ದರು. ನಂತರದಲ್ಲಿ ಹೊಸ ಮಾದರಿಯಲ್ಲಿ 500 ಮತ್ತು 2 ಸಾವಿರ ಹೊಸ ನೋಟು ಬಿಡುಗಡೆ ಮಾಡಲಾಗಿತ್ತು. RBI2019 ರಿಂದ 2000 ನೋಟುಗಳ ಮುದ್ರಣವನ್ನು ನಿಲ್ಲಿಸಿದ್ದು. ಈ ನೋಟುಗಳನ್ನು ಸೆಪ್ಟೆಂಬರ್ 30ರವರೆಗೆ ವಿನಿಮಯ ಮಾಡಿಕೊಳ್ಳುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಇನ್ನೂ ಮೂವತ್ತು ಸಾವಿರ ರೂಪಾಯಿ ನೋಟುಗಳು ಮಾತ್ರ ಒಮ್ಮೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.