suddibindu.in
ಕಾರವಾರ: ಉತ್ತರ ಕನ್ನಡ(uttarkannada) ಜಿಲ್ಲೆಯ ಜಗತ್ಫ್ರಸಿದ್ಧ ಪ್ರವಾಸಿ ತಾಣ(tourist destination) ಯಾಣದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ದೇಶದ ಮೊಟ್ಟ ಮೊದಲ ಸಾರ್ವಜನಿಕ ವೈಫೈ-೭(Wi-Fi-7,) ಸೇವೆಗೆ ಮಹಾಶಿವರಾತ್ರಿಯಂದು ಚಾಲನೆ ಸಿಗಲಿದೆ.

ಯಾಣದ ಸುತ್ತ ಮುತ್ತಲ ಪ್ರದೇಶದಲ್ಲಿ ಮೊಬೈಲ್ (Mobile) ಸಿಗ್ನಲ್ ಸಿಗದೆ ಪ್ರವಾಸಿಗರಿಗೆ ತುಂಬಾ ತೊಂದರೆಯಾಗುತ್ತಿತ್ತು. ಇಂತಹ ದುರ್ಗಮ ಪ್ರದೇಶದಲ್ಲಿ ಬಿ.ಎಸ್.ಎನ್.ಎಲ್, (BSNL) ಭಾರತ ಏರ್ ಫೈ ಹಾಗೂ ಜಿಎನ್‌ಎ ಕಂಪನಿಗಳ ಸಹಯೋಗದೊಂದಿಗೆ ಯಾಣದ ಭೈರವೇಶ್ವರ ದೇವಸ್ಥಾನ ಹತ್ತಿರ ಹಾಗೂ ಎರಡು ಪಾರ್ಕಿಂಗ್ ಸ್ಥಳಗಳಲ್ಲಿ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ಹಾಗೂ ಅಂಗಡಿಕಾರರಿಗೆ ಸಂಪರ್ಕದ ಜೊತೆಗೆ ಡಿಜಿಟಲ್ (Digital )ಪಾವತಿಗೂ ತುಂಬಾ ಅನುಕೂಲವಾಗಲಿದೆ.

ಮಹಾಶಿವರಾತ್ರಿ (Mahashivratri) ದಿನವಾದ ಮಾರ್ಚ 8ರ ಬೆಳಗ್ಗೆ 10ಗಂಟೆಗೆ ಸಂಸದ ಅನಂತಕುಮಾರ್‍ ಹೆಗಡೆ ಸಾರ್ವಜನಿಕ ವೈಫೈ -7 ಸೇವೆಗೆ ಚಾಲನೆ ನೀಡಲಿದ್ದು, ವಿಶೇಷ ಆಮಂತ್ರಿತರಾಗಿ ಕುಮಟಾ ಶಾಸಕ ದಿನಕರ ಶೆಟ್ಟಿಯವರು ಆಗಮಿಸಲಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು, ಬಿ.ಎಸ್.ಎನ್.ಎಲ್. ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ದೇವಸ್ಥಾನ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .