Farmers protest Against mp ananth Kumar hegde
suddibindu. Im
ಬೆಳಗಾವಿ: ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಂಸದರಾಗಿರುವ ಅನಂತ್ಕುಮಾರ್ ಹೆಗಡೆ (MP Anantkumar Hegde) ಕಾರ್ಗೆ ರೈತರು ಮುತ್ತಿಗೆ ಹಾಕಲು ಪ್ರಯತ್ನಿಸಿದ ಘಟನೆ ಖಾನಾಪುರದಲ್ಲಿ ನಡೆದಿದೆ.
ಸಂಸದರಾಗಿ ಗೆದ್ದ ಬಳಿಕ ಮತ ಹಾಕಿ ಗೆಲ್ಲಿಸಿದ ಕ್ಷೇತ್ರದ ಮತದಾರರ ಕಣ್ಣಿಗೆ ಕಾಣಿಸಿಕೊಳ್ಳದೆ ದೂರ ಉಳಿದಿದ್ದ ಅನಂತಕುಮಾರ ಹೆಗಡೆ ಚುನಾವಣೆ ಸಮೀಪಿಸುತ್ತಿದ್ದಂತೆ ಆಕ್ಟಿವ್ ಆಗಿದ್ದಾರೆ. ಅವರು ಇಂದು ಕೆನರಾ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಖಾನಾಪುರ (Khanapura) ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸಕೈಗೊಂಡಿದ್ದರು.ಈ ವೇಳೆ ಕ್ಷೇತ್ರದ ಸಮಸ್ಯೆ ಪರಿಹರಿಸುವಂತೆ ಸಂಸದರಿಗೆ ಮನವಿ ನೀಡಬೇಕೆಂದಹ ರೈತರು ಕಾಯುತ್ತಿದ್ದರು. ರೈತರು ನಿಂತಿದ್ದ ಮಾರ್ಗದಲ್ಲೆ ಬಂದ ಸಂಸರು ರೈತರನ್ನ ಕಂಡು ಕಾರಿನಿಂದ ಕೆಳಗಿಳಿಯದೆ ರೈತರ ಮನವಿಯನ್ನು ಕೂಡ ಪಡೆಯದೇ ಹೊರಟು ಹೋಗಿದ್ದಾರೆ.
ಇದನ್ನೂ ಓದಿ:-
- ಎಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು : ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ
- ಕಲ್ಲಮಠದ ಜೀರ್ಣೋದ್ಧಾರ ಸಮಿತಿಗೆ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ನಿಂದ 5ಲಕ್ಷ ದೇಣಿಗೆ
- ಧರ್ಮಸ್ಥಳದ ಸುತ್ತಾ ನೂರಾರು ಶವಗಳು : ನ್ಯಾಯಾಲಯದ ಎದುರು ಬೆಚ್ಚಿ ಬೀಳಿಸುವ ಹೇಳಿಕೆ
ಸಂಸದರ ವರ್ತನೆಯಿಂದ ಆಕ್ರೋಶಗೊಂಡ ರೈತರು, ಕಾರ್ಗೆ ಮುತ್ತಿಗೆ ಹಾಕೋದಕ್ಕು ಯತ್ನಿಸಿದರು. ರೈತ ಸಂಘಟನೆ ಮುಖಂಡರು, ಸಂಸದರ ವಿರುದ್ಧ ಧಿಕ್ಕಾರ ಕೂಗಿ ಇವರಂತಹ ಸಂಸದರು ನಮ್ಮಗೆ ಬೇಡ.ಈ ಬಾರಿ ಚುನಾವಣೆಯಲ್ಲಿ ನಾವು ನೋಟಾ ವೋಟ್ ಮಾಡುವುದುದಾಗಿ ಆಕ್ರೋಶ ಹೊರಹಾಕಿದರು.