ಸುದ್ದಿಬಿಂದು ಬ್ಯೂರೋ
ಭಟ್ಕಳ : ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಒಂದು ಅಲೆಯ ರಭಸಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಿರುವ ಘಟನೆ ಮಾವಿನಕುರ್ವೆ ಬಂದರಿನಲ್ಲಿ ನಡೆದಿದೆ.
ಪ್ರಜ್ಞಾ ಹೆಸರಿನ ಫಿಶಿಂಗ್ ಬೋಟ್ ಇದಾಗಿದ್ದು,ಈ ಬೋಟ್ ನರಸಿಂಹ ಗೋವಿಂದ ಖಾರ್ವಿ ಎಂಬುವವರಿಗೆ ಸೇರಿದ್ದು ಎಂದು ಗೋತ್ತಾಗಿದೆ.
ಮೀನುಗಾರಿಕೆ ಮುಗಿಸಿಕೊಂಡು ವಾಪಸ್ ಆಗುತ್ತಿದ್ದವೇಳೆ ಅಲೆಯ ರಭಸಕ್ಕೆ ಫೈಬರ್ ಬೋಟ್ ಆಗಿದ್ದರಿಂದ ಬೋಟ್ ಡ್ಯಾಮೇಜ್ ಆಗಿ ಮುಳುಗಡೆಯಾಗಿತ್ತು.
ಇನ್ನೂ ನಾಲ್ವರು ಮೀನುಗಾರರು ಅಪಾಯಕ್ಕೆ ಸಿಲುಕ್ಕಿದ್ದರು, ಅಪಾಯಕ್ಕೆ ಸಿಲುಕ್ಕಿದ್ದ ನಾಲ್ವರು ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಘಟನೆಯಿಂದಾಗಿ ಆರು ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.