ಸುದ್ದಿಬಿಂದು ಬ್ಯೂರೋ
ಕಾರವಾರ :
ನಾನು ಇಷ್ಟು ದಿನ ನನ್ನ ವೈಯಕ್ತಿಕ ಕಾರಣದಿಂದ ರಾಜಕೀಯದಿಂದ ದೂರ ಉಳಿದುಕೊಂಡಿದ್ದೆ. ಶೀಘ್ರದಲ್ಲಿಯೇ ರಾಷ್ಟ್ರೀಯ ಪಕ್ಷವೊಂದ‌‌ನ್ನ ಸೇರ್ಪಡೆ ಆಗಲಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿಕೆ ನೀಡಿದ್ದಾರೆ.

ಜಿಲ್ಲಾ ಪತ್ರಿಕಾಭವದಲ್ಲಿ ಸುದ್ದಿಗೋಷ್ಟಿಯನ್ನ ಉದ್ದೇಶಿಸಿ ಮಾತನಾಡಿದ ಆನಂದ ಅಸ್ನೋಟಿಕರ್. ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿಯೆ ನನಗೆ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸುವ ಅವಕಾಶ ಹತ್ತಿರವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವಕಾಶ ಕೈ ತಪ್ಪಿದೆ. ಒಂದು ವೇಳೆ ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರೂ ಸಹ ರೂಪಾಲಿ ನಾಯ್ಕ ಅವರು ಹೆಚ್ಚಿನ ಮತಗಳ ಅಂತರದಿಂದ ‌ಸೋಲುತ್ತಿದ್ದರು.ನಾನು ಸ್ಪರ್ಧೆಯಿಂದ ದೂರ ಉಳಿದಿರುವುದರಿಂದ ಸೋಲಿನ ಅಂತರ ಕಡಿಮೆ ಆಗಿದೆ ಎಂದು ಆನಂದ ಅಸ್ನೋಟಿಕರ್ ತಿಳಿಸಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದ ಆನಂದ ಗಣಪತಿ ಉಳ್ವೇಕರ್‌ ಎಂ ಎಲ್ ಸಿ ಆದ ಬಳಿಕ ಮತ್ತು ರೂಪಾಲಿ ನಾಯ್ಮ ಅವರು ಐದು ವರ್ಷ ಶಾಸಕರಾದ ದಿನದಿಂದ ಅವರಿಗೆ ಅಭಿನಂದನೆ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರಿಬ್ಬರ ಸಮಯವನ್ನ ತೆಗೆದುಕೊಂಡು ಅವರು ಎಲ್ಲಿ ಇರಲಿದ್ದಾರೆ ಅಲ್ಲಿಗೆ ಹೋಗಿ ಇಬ್ಬರಿಗೂ ಕೂಡ ಅಭಿನಂದನೆ ಸಲ್ಲಿಸಿ ಬರುವುದಾಗಿ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.