suddibindu.in
Karwar: ನೂರಾರು ವರ್ಷ ಇತಿಹಾಸವನ್ನ ಹೊಂದಿರುವ ಕಾರವಾರ ನಗರದಲ್ಲಿರುವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಕಳೆದ ಹತ್ತು ವರ್ಷದಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರವಾಗಿದೆ ಎಂದು ಹಠಾತ ನಿದ್ದೆಯಿದ್ದೆ ಎಚ್ಚೆತ್ತು ದೂರು ನೀಡಲು ಮುಂದಾದ ಆಡಳಿತ ಮಂಡಳಿಯ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಬ್ಯಾಂಕ್ ನಲ್ಲಿ ಅಂದಾಜು 55ಕೋಟಿ ಹಣ ಅವ್ಯವಹಾರವಾಗಿರುವ ಬಗ್ಗೆ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಆಡಳಿತ ಮಂಡಳಿ ತಿಳಿದೆ. ಈ ಬ್ಯಾಂಕನಲ್ಲಿ ಕಳೆದ 2014ರಿಂದಲ್ಲೆ ಅವ್ಯವಹಾರವಾಗಿದೆ ಎನ್ನಲಾಗಿದೆ. ಹತ್ತುವರ್ಷದಿಂದ ಅವ್ಯವಹಾರವಾಗುತ್ತಿದ್ದರು ಬ್ಯಾಂಕ್‌ನ ಆಡಳಿತ ಮಂಡಳಿ ಇದುವರಗೆ ಎಚ್ಚೆತ್ತುಕೊಳ್ಳದೆ ಇಷ್ಟು ವರ್ಷಗಳ ಕಾಲ ಯಾವ ಉದ್ದೇಶದಿಂದ ಸುಮ್ಮನಾಗಿದ್ದರು ಎನ್ನುವ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ.

ಇನ್ನೊಂದು ದುರಂತವೆಂದರೆ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾಗಿದ್ದ ಆಗಿದ್ದ ಗುರುದಾಸ ಅವರು ಕಳೆದ ಹತ್ತು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ‌.ಒಂದು ಕಡೆ ಅವರೆ ಅವ್ಯಹಾರ ಮಾಡಿದ್ದಾರೆಂದು ಆಡಳಿತ‌ ಮಂಡಳಿ ಹೇಳುತ್ತಿದೆ. ಅವ್ಯವಹಾರದ ಬಗ್ಗೆ ತಿಳಿದು ಯಾಕೆ ಆಡಳಿ ಮಂಡಳಿ ಮೌನವಾಗಿತ್ತು ಎಂದು ಗ್ರಾಹಕರು ಪ್ರಶ್ನೆ ಮಾಡುತ್ತಿದ್ದಾರೆ. ಅವ್ಯವಹಾರ ಮಾಡಿದವರು ಜೀವಂತವಾಗಿರುವಾಗ ದೂರು ನೀಡದ ಆಡಳಿತ ಮಂಡಳಿ ಅವರು ಮೃತರಾದ ಮೂರು ವರ್ಷದ ಬಳಿಕ ದೂರು ನೀಡಿದೆ.

ಇದು ಹತ್ತು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ಆಡಳಿತ ಮಂಡಳಿಯ ನಿರ್ದೇಶಕರೊಬ್ಬರು ಈ ಬ್ಯಾಂಕ್ ಬೇಡವಾಗಿದೆ ಎಂದು ನೀಡಿರುವ ಹೇಳಿಕೆ ಸಾರ್ವಜನಿಕರಲ್ಲಿ ಹಾಗೂ ಬ್ಯಾಂಕ್‌ನ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ…

ಬ್ಯಾಂಕ್ ಎದುರು ಗ್ರಾಹಕರ ಆಕ್ರೋಶ
ಕಾರವಾರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಕೋಟಿ ಕೋಟಿ ಹಣ ಅವ್ಯವಹಾರವಾಗಿದೆ ಎನ್ನುವ ಬಗ್ಗೆ ಸುದ್ದಿ ತಿಳಿದ ಬ್ಯಾಂಕ್‌ ಗ್ರಾಹಕರು ತಮ್ಮ ಖಾತೆಯಲ್ಲಿರುವ ಹಣ ವಾಪಸ್ ಪಡೆಯಲು ನೂರಾರು ಸಂಖ್ಯೆಯಲ್ಲಿ ಬ್ಯಾಂಕ್‌ಗೆ ಆಗಮಿಸುತ್ತಿದ್ದಾರೆ.