suddibindu.in
ಹೊನ್ನಾವರ : ಬೈಕ್ ಸವಾರ ಹೆದ್ದಾರಿಯಲ್ಲಿ ಹೆಲ್ಮೆಟ್ ಧರಿಸಿದೆ ಬೈಕ್ ಚಲಾಯಿಸಿಕೊಂಡು ಹೋದರೆ ದಂಡ ಕಾನೂನಿನ ಅಡಿಯಲ್ಲಿ ದಂಡ ಹಾಕೋದು ಸಹಜ, ಆದರೆ ಟಿಪ್ಪರ್ ಚಾಲಕ ಹೆಲ್ಮೆಟ್ ಹಾಕಿ ವಾಹನ ಚಾಲನೆ ಮಾಡಬೇಕು ಎನ್ನುವ ನಿಯಮ ಯಾವತ್ತು ಜಾರಿ ಬಂತು ಎನ್ನುವುದು ಗೋತ್ತಾಗತ್ತಿಲ್ಲ. ಟಿಪ್ಪರ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡದ ರಶೀದಿ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
- ಕಂದಾಯ ಅಧಿಕಾರಿಗಳ ಮೈ ಚಳಿ ಬಿಡಿಸಿದ ಆರ್ ವಿ ದೇಶಪಾಂಡೆ
- ರಾಜ್ಯದ ಜನತೆಗೆ ಬಿಸಿಯಾದ “ನಂದಿನಿ”
- ಲಿಂಗಾಯತ ಶಾಸಕರು ಬಿಜೆಪಿ ತೊರೆದು ಬನ್ನಿ : ಜಯಮೃತ್ಯುಂಜಯ ಸ್ವಾಮೀಜಿ ಕರೆ
ಹೊನ್ನಾವರದಲ್ಲಿ ಉಸುಕು ಸಾಗಿಸುವ ಬಗ್ಗೆ ಟಿಪ್ಪರ್ ಮಾಲೀಕ ತನ್ನ ವಾಹನ ಸಂಖ್ಯೆ KA-21 B3214 ನೊಂದಣಿ ಹೊಂದಿರುವ ಟಿಪ್ಪರನಲ್ಲಿ ಉಸುಕು ಸಾಗಾಟ ಮಾಡಲು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆದು ಟಿಪ್ಪರನ್ನ ಉಸುಕು ಸಾಗಾಟಕ್ಕೆ ಕಳುಹಿಸಿದ. ಈ ವೇಳೆ ಟಿಪ್ಪರ ತಡೆದ ಹೊನ್ನಾವರ ಪೊಲೀಸರು ಆ ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಂದ 500ರೂಪಾಯಿ ದಂಡ ವಸೂಲಿ ಮಾಡಿ ರಶೀದಿ ನೋಡಿದ ಚಾಲಕನಿಗೆ ಪೊಲೀಸರ ರಶೀದಿ ನೋಡಿ ಶಾಕ್ ಆಗಿದೆ. ಸರ್ ನಾನು ಬೈಕ್ ಓಡಸ್ತಾ ಇಲ್ಲ ಟಿಪ್ಪರ್ ಅಂತಾ ಚಾಲಕ ಹೇಳಿದ್ದಾನಂತೆ..ಅದೆಲ್ಲಾ ಇರತ್ತೆ ಅಂತಾ ಹೇಳಿ ರಶೀದಿ ಕೊಟ್ಟು ಕಳುಹಿಸಿದ್ದಾರೆ.
ಆನ್ ಲೈನಲ್ಲಿ ಯಾರೇ KA-21 B3214 ನಂಬರ್ ತಪಾಷಣೆ ಮಾಡಿದರೂ ಕೂಡ ಅಲ್ಲಿ ಟಿಪ್ಪರ್ ಎಂದು ಕಾಣಸಿಗುತ್ತದೆ. ಆದರೆ ಹೊನ್ನಾವರ ಪೊಲೀಸರು ಹೊಸದಾಗಿ ಟಿಪ್ಪರ್ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ ಮಾಡಲು ಹೊರಟಿರುವಂತೆ ಕಾಣುತ್ತಿದೆ. ಪೊಲೀಸರೆ ನೀಡಿರುವ ರಶೀದಿ ಪ್ರಕಾರ ಇನ್ನ ಮೇಲೆ ಹೊನ್ನಾವರಲ್ಲಿ ಟಿಪ್ಪರ್ ಓಡಿಸುವ ಚಾಲಕರು ಕೂಡ ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಇದ್ದರೆ ದಂಡ ಬಿಳುವುದಂತು ಗ್ಯಾರಂಟಿ ಆಗುವಂತಿದೆ..ಇದೀಗ ಹೊನ್ನಾವರ ಪೊಲೀಸರು ಟಿಪ್ಪರ್ ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತ್ತಿದೆ.