ಸುದ್ದಿಬಿಂದು ಬ್ಯೂರೋ
ಅಂಕೋಲಾ: ತಾಲೂಕಿನ ಸರಕಾರಿ ಆಸ್ಪತ್ರೆಯ(Government Hospital)ಎದುರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಮಂಗಳಸೂತ್ರ ಹಾಗೂ ಇಪ್ಪತ್ತು ಸಾವಿರ ರೂಪಾಯಿಯನ್ನು ದರೋಡೆಯಾಗಿದ್ದು ಅಂಕೋಲಾ ಪಟ್ಟಣದಲ್ಲಿ ಆತಂಕ ಸೃಷ್ಠಿಯಾದ ಘಟನೆ ನಡೆದಿದೆ.
ಆಟೋ ಚಾಲಕನ ಪತ್ನಿ ಆರೋಗ್ಯ ತಪಾಸಣೆಗಾಗಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಹೋಗಿದ್ದಳು. ಬ್ಯಾಂಕನ ಸಾಲ (Bank Loan)ತುಂಬಲು ಮನೆಯಲ್ಲಿದ್ದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಸಹ ತನ್ನ ಜೊತೆಗೆ ತೆಗೆದುಕೊಂಡು ತೆರಳಿದ್ದಾಳೆ.
ಇದೇ ಸಂದರ್ಭದಲ್ಲಿ ಬೈಕ್ ಮೇಲೆ ಕಾದು ಕುಳಿತಿದ್ದ ಮೂರು ಜನ ದುಷ್ಕರ್ಮಿಗಳು, ಯಾರು ಇಲ್ಲದ ಸಂದರ್ಭವನ್ನು ಅರಿತು ಮಹಿಳೆ ಸರಕಾರಿ ಆಸ್ಪತ್ರೆ ತಲುಪುತ್ತಿದ್ದಂತೆ ಒಮ್ಮೆಲೇ ಎರಗಿ ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಮಂಗಳಸೂತ್ರ ಹಾಗೂ ಬ್ಯಾಗ್ ನಲ್ಲಿದ್ದ ಇಪ್ಪತ್ತು ಸಾವಿರ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈಗಾಗಲೇ ಸಿ.ಸಿ. ಟಿವಿ(CC Tv)ದೃಶ್ಯವನ್ನು ವೀಕ್ಷಣೆ ಮಾಡುತ್ತಿದ್ದು ಪಿಎಸ್ಸೈ(psi) ಉದ್ದಪ್ಪ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಹಣ ಹಾಗೂ ಆಭರಣ ದೋಚಿದ ಕಳ್ಳರು ಯಾರು ಎಂಬುದು ತನಿಖೆಯ ನಂತರವೇ ತಿಳಿದು ಬರಬೇಕಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು (Special Team,)ರಚಿಸಿ ಬಲೆ ಬೀಸಿದ್ದಾರೆ.